ಕನ್ನಡದ ಚಿತ್ರರಂಗದ ನಟ, ನಟಿಯರನ್ನು ಭೇಟಿಯಾದ ಕೇಂದ್ರ ಸಚಿವ
ಬೆಂಗಳೂರು: ಕನ್ನಡದ ಚಿತ್ರರಂಗದ ನಟ, ನಟಿಯರನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಭೇಟಿಯಾಗಿದ್ದಾರೆ.
ನಿನ್ನೆ (ಮಂಗಳವಾರ) ಬೆಂಗಳೂರಿಗೆ ಆಗಮಿಸಿದ್ದ ಅನುರಾಗ್ ಸಿಂಗ್ ಠಾಕೂರ್ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಂತರ ಕನ್ನಡ ಚಿತ್ರರಂಗದ ನಟ ರಮೇಶ್ ಅರವಿಂದ್, ಸುಧಾರಾಣಿ, ಅನು ಪ್ರಭಾಕರ್ ಸೇರದಂತೆ ಕೆಲ ಗಣ್ಯರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಸಿನಿಮಾ ಕುರಿತು ಹೆಚ್ಚಿನ ಒಲವು ಹೊಂದಿರುವ ಠಾಕೂರ್, ಈ ಹಿಂದೆ ಗೋವಾದಲ್ಲಿ ನಡೆದ 52ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ್ದರು.
ಈ ವೇಳೆ ಮಾತನಾಡಿದ್ದ ಅವರು, ‘ನಮ್ಮ ನುರಿತ ಯುವಕರ ತಾಂತ್ರಿಕ ಕೌಶಲ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತವನ್ನು ವಿಶ್ವಕ್ಕೆ ಪೋಸ್ಟ್ ಪ್ರೊಡಕ್ಷನ್ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಜೊತೆಗೆ ದೇಶದ ಪ್ರಾದೇಶಿಕ ಹಬ್ಬಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು’ ಎಂದು ಭರವಸೆ ನೀಡಿದ್ದರು.








