IndiGo ಬಿಕ್ಕಟ್ಟಿನ ಪರಿಣಾಮವಾಗಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಆಕಸ್ಮಿಕವಾಗಿ ಟಿಕೆಟ್ ದರಗಳು ಆಕಾಶಕ್ಕೆ ಏರಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ವಿಮಾನಯಾನ ಸಂಸ್ಥೆಗಳು ಅನಿಯಂತ್ರಿತವಾಗಿ ದರ ಹೆಚ್ಚಿಸುವುದನ್ನು ತಡೆಯಲು, ಟಿಕೆಟ್ ದರಗಳಿಗೆ ಗರಿಷ್ಠ ಮಿತಿ (Price Cap) ನಿಗದಿ ಮಾಡಿ ಪ್ರಕಟಿಸಿದೆ.
ಹೊಸ ನಿಯಮದಂತೆ:
500km ವರೆಗೆ: ಗರಿಷ್ಠ ₹7,500 ಮಾತ್ರ
500–1000km: ಗರಿಷ್ಠ ₹12,000
1000–1500km: ಗರಿಷ್ಠ ₹15,000
1500km ಗಿಂತ ಹೆಚ್ಚು: ಗರಿಷ್ಠ ₹18,000 ಮಾತ್ರ ವಿಧಿಸಬೇಕು
IndiGo ವಿಮಾನಗಳ ದೊಡ್ಡ ಪ್ರಮಾಣದ ರದ್ದುಗೊಳಿಸುವಿಕೆ, ಮರುಷೆಡ್ಯೂಲಿಂಗ್ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಏರಿಕೆ ಕಂಡುಬಂದಿತ್ತು. ಇದನ್ನು ಕಾರಣ ಮಾಡಿಕೊಂಡು ಉಳಿದ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರಗಳ ಬೆಲೆ ಏರಿಸಿದವು.
ಪ್ರಯಾಣಿಕರ ಮೇಲೆ ಅನ್ಯಾಯವಾಗಬಾರದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಈ ಬೆಲೆ ಮಿತಿಗಳನ್ನು ಘೋಷಿಸಿದೆ. ಈಗ ದೇಶದ ಯಾವುದೇ ವಿಮಾನಯಾನ ಕಂಪನಿಗಳು ಮೇಲಿನ ದರಕ್ಕಿಂತ ಹೆಚ್ಚು ವಸೂಲಿಸಲು ಸಾಧ್ಯವಿಲ್ಲ.
ಸರ್ಕಾರದ ಈ ನಿರ್ಧಾರ ಪ್ರಯಾಣಿಕರಿಗೆ ದೊಡ್ಡ ನಿರಾಳತೆಯನ್ನು ತಂದಿದೆ. ವಿಮಾನಯಾನದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣಕ್ಕೆ ಇದು ಸಹಕಾರಿ ಎನ್ನಲಾಗಿದೆ.








