ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಅಧಿಕೃತವಾಗಿ CET ಪರೀಕ್ಷೆಯ ದಿನಾಂಕ ಘೋಷಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಪರೀಕ್ಷೆಗಳು ಏಪ್ರಿಲ್ 16 ಮತ್ತು 17 ರಂದು ನಡೆಯಲಿವೆ.
ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಲು:
ಜ. 23ರಿಂದ ಫೆ. 21ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು KEA ತಿಳಿಸಿದೆ.
ಪರೀಕ್ಷೆಯ ವೇಳಾಪಟ್ಟಿ:
ಏಪ್ರಿಲ್ 16:
ಬೆಳಿಗ್ಗೆ 10:30: ಭೌತಶಾಸ್ತ್ರ
ಮಧ್ಯಾಹ್ನ 2:30: ರಸಾಯನಶಾಸ್ತ್ರ
ಏಪ್ರಿಲ್ 17:
ಬೆಳಿಗ್ಗೆ 10:30: ಗಣಿತ
ಮಧ್ಯಾಹ್ನ 2:30: ಜೀವಶಾಸ್ತ್ರ
ಏಪ್ರಿಲ್ 18:
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಪ್ರವೇಶಾರ್ಥಿಗಳು ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ತಯಾರಿಗಳನ್ನು ಪ್ರಾರಂಭಿಸಬಹುದು.








