ದಾವಣಗೆರೆ: ಒಂದೇ ದಿನ ರಾತ್ರಿ ಚಡ್ಡಿಗ್ಯಾಂಗ್ ಖದೀಮರು 6 ಮನೆಗಳು ಹಾಗೂ 2 ದೇವಸ್ಥಾನಗಳಲ್ಲಿ ಚಡ್ಡಿಗ್ಯಾಂಗ್ ಸರಣಿಗಳ್ಳತನ ಮಾಡಿದೆ.
ಜಿಲ್ಲೆಯ ನ್ಯಾಮತಿಯಲ್ಲಿ (Nyamati) ಈ ಕೃತ್ಯ ಬೆಳಕಿಗೆ ಬಂದಿದ್ದು, ಚಡ್ಡಿಗ್ಯಾಂಗ್ ನ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಚಡ್ಡಿಗ್ಯಾಂಗ್ ನ ಖದೀಮರು ಚಡ್ಡಿ, ಟೀ ಶರ್ಟ್ ಧರಿಸಿ ರಾತ್ರಿ ವೇಳೆ ಬೀದಿ ಬೀದಿಗಳಲ್ಲಿ ತಿರುಗಾಟ ನಡೆಸಿ ಇಡೀ ಪಟ್ಟಣ ಸುತ್ತಾಡಿದೆ. ನಂತರ ನ್ಯಾಮತಿ ಪಟ್ಟಣದ ಕಾಳಮ್ಮ ಬೀದಿಯ ಕಾಳಮ್ಮ ದೇವಸ್ಥಾನದ ಬೀಗ ಒಡೆದು 10 ಗ್ರಾಂ ತಾಳಿ, ನಂತರ ನೆಹರೂ ರಸ್ತೆಯಲ್ಲಿರುವ ಮೂಕಾಂಬಿಕ ದೇಗುಲದ ಹುಂಡಿ ಒಡೆದು ಹಣ ದೋಚಿದ್ದಾರೆ.
ಅಲ್ಲಿಂದ ಮರಿಡೇರ ಹೊಸಮನೆ ರಾಜಪ್ಪ ಎಂಬುವವರ ಮನೆಯ ಬೀರುವಿನಲ್ಲಿದ್ದ 50 ಗ್ರಾಂ ಚಿನ್ನ, ಸಾವಿತ್ರಮ್ಮ ಎಂಬುವವರ ಮನೆಯಲ್ಲಿ 80 ಸಾವಿರ ನಗದು, ವಿಶ್ವೇಶ್ವರಯ್ಯ ಬೀದಿಯ ಗಡೇಕಟ್ಟೆ ಯಶೋಧಮ್ಮ ಎಂಬವರ ಮನೆಯಲ್ಲಿ 200 ಗ್ರಾಂ ಬೆಳ್ಳಿಯ ಆಭರಣ ಹಾಗೂ 15 ಸಾವಿರ ಹಣ ಪರಾರಿಯಾಗಿದ್ದಾರೆ.
ಹಗಲು ವೇಳೆ ನಗರದಲ್ಲಿ ಸುತ್ತಾಟ ನಡೆಸುವ ಖದೀಮರು, ಯಾರು ಇಲ್ಲದೇ ಇರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ ವೇಳೆ ಬೀಗ ಒಡೆದು ಕಳ್ಳತನ ಮಾಡುತ್ತಾರೆ ಎನ್ನಲಾಗಿದೆ. ಈ ಕುರಿತು ನ್ಯಾಮತಿ ಪೊಲೀಸ್ (Nyamati Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.