ಗ್ಲೇನ್ ಮ್ಯಾಕ್ಸ್ ವೆಲ್ ವಿಕೆಟ್ ಕಬಳಿಸಲು ಚಾಹಲ್ -ಧೋನಿ ಮಾಡಿದ್ದ ತಂತ್ರವೇನು ಗೊತ್ತಾ…?
ಗ್ಲೇನ್ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ ಮೆನ್. ಏಕದಿನ ಹಾಗೂ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಬೌಲರ್‍ಗಳ ಚಳಿ ಬಿಡಿಸುತ್ತಾರೆ. ಬೃಹತ್ ಮೊತ್ತ ದಾಖಲಿಸುವಾಗ ಅಥವಾ ಬೃಹತ್ ಸವಾಲನ್ನು ಬೆನ್ನಟ್ಟುವಾಗ ಗ್ಲೇನ್ ಮ್ಯಾಕ್ಸ್ ವೆಲ್ ಆಟದ ಖದರ್ ಬೇರೇನೇ ಇರುತ್ತೆ.
ಆದ್ರೆ 2017ರ ಭಾರತ ವಿರುದ್ಧದ ಸರಣಿಯಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಆಟ ನಡೆಯಲಿಲ್ಲ. ಟೀಮ್ ಇಂಡಿಯಾದ ಯುಜುವೇಂದ್ರ ಚಾಹಲ್ ಸ್ಪಿನ್ ದಾಳಿಯ ಎದುರು ಮ್ಯಾಕ್ಸ್ ವೆಲ್ ಮಂಕಾಗಿಬಿಟ್ಟಿದ್ದರು. ಅಲ್ಲದೆ ನಾಲ್ಕು ಬಾರಿ ವಿಕೆಟ್ ಕೂಡ ಒಪ್ಪಿಸಿದ್ದರು. ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಹಾಗೂ ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಚಾಹಲ್ ಸ್ಪಿನ್ ದಾಳಿಯನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದರು.
ಅಂದ ಹಾಗೇ, ಯುಜುವೇಂದ್ರ ಚಾಹಲ್ ಅವರು ಗ್ಲೇನ್ ಮ್ಯಾಕ್ಸ್ ವೆಲ್ ವಿಕೆಟ್ ಅನ್ನು ಹೇಗೆ ಉರುಳಿಸಲು ಸಾಧ್ಯವಾಯ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಬಿಸಿಸಿಐನ ಆನ್ ಲೈನ್ ಕಾರ್ಯಕ್ರಮದಲ್ಲಿ ಮಯಾಂಕ್ ಜೊತೆ ತನ್ನ ಪ್ಲಾನ್ ಹೇಗೆ ವರ್ಕ್ ಔಟ್ ಆಯ್ತು ಮತ್ತು ಯಾರೆಲ್ಲಾ ಸೇರಿಕೊಂಡು ಪ್ಲಾನ್ ಮಾಡಿದ್ದೇವು ಎಂಬುದನ್ನು ಹೇಳಿಕೊಂಡಿದ್ದಾರೆ.
ನಾನು ಯಾವಾಗಲೂ ಗ್ಲೇನ್ ಮ್ಯಾಕ್ಸ್ ವೆಲ್‍ಗೆ ಔಟ್ ಸೈಡ್ ಸ್ಟಂಪ್ ಕಡೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದೆ. ಹಾಗೇ ಕೆಲವೊಂದು ಸಲ ವಿಭಿನ್ನವಾದ ಎಸೆತಗಳನ್ನು ಹಾಕುತ್ತಿದೆ. ಕೆಲವೊಂದು ಸಲ ಔಟ್ ಸೈಡ್ ಸ್ಟಂಪ್ ಕಡೆ, ಮತ್ತೆ ಕೆಲವೊಂದು ಬಾರಿ ನೇರವಾಗಿ ಬೌಲಿಂಗ್ ಮಾಡುತ್ತಿದೆ ಎಂದು ಯುಜುವೆಂದ್ರ ಚಾಹಲ್ ಹೇಳಿದ್ದಾರೆ.
ಇದೇ ವೇಳೆ 2017ರ ಸರಣಿಯಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಹೇಗೆ ಸ್ಟಂಪ್ ಔಟಾದ್ರು ಎಂಬುದನ್ನು ಸಹ ಇದೇ ವೇಳೆ ಚಾಹಲ್ ಹೇಳಿದ್ರು. ಈ ತಂತ್ರವನ್ನು ರಚಿಸಿದ್ದು ನಾನು ಮತ್ತು ಮಹೀ ಭಾಯ್. ನಾನು ಅವರಿಗೆ ಔಟ್ ಸೈಡ್ ಸ್ಟಂಪ್ ಕಡೆ ಬೌಲಿಂಗ್ ಮಾಡುತ್ತಿದೆ. ನನಗೆ ಗೊತ್ತಿತ್ತು. ಅವರು ಬೀಸು ಹೊಡೆತಕ್ಕೆ ಮುಂದಾಗುತ್ತಾರೆ ಅಂತ. ಆದ್ರೆ ನಾನು ಸತತವಾಗಿ ಅದೇ ರೀತಿ ಬೌಲಿಂಗ್ ಮಾಡುತ್ತಿದೆ. ಆದ್ರೆ ಅವರಿಗೆ ತಾಳ್ಮೆ ಕಡಿಮೆ ಇತ್ತು. ಆಗ ಅವರು ನನ್ನ ಎಸೆತಗಳಿಗೆ ದಿಟ್ಟ ಉತ್ತರ ನೀಡಲು ಶುರು ಮಾಡಿದ್ದರು. ಈ ಹಂತದಲ್ಲಿ ನಾನು ಮಹೀ ಭಾಯ್ ಬಳಿ ಬಂದು ನಾನು ಏನು ಮಾಡಲಿ ಅಂತ ಕೇಳಿದ್ದೆ. ಆಗ ಮಹೀ ಭಾಯ್ ಹೇಳಿದ್ರು. ಆತನಿಗೆ ಔಟ್ ಸೈಡ್ ಸ್ಟಂಪ್ ಕಡೆ ಬೌಲಿಂಗ್ ಮಾಡು. ಆತನನ್ನು ಔಟ್ ಮಾಡುವ ಅವಕಾಶ ಸಿಗುತ್ತೆ ಎಂದು ಹೇಳಿದ್ದರು. ಕೊನೆಗೆ ಅದೇ ರೀತಿ ಆಯ್ತು, ಮಹೀ ಭಾಯ್ ಮತ್ತು ನನ್ನ ತಂತ್ರ ಯಶಸ್ವಿಯಾಯ್ತು ಅಂತ ಚಾಹಲ್ ಹೇಳಿದ್ದಾರೆ.