Bengaluru : ಖತರ್ನಾಕ್ ಚೈನ್ ಸ್ನಾಚರ್ ಗಳ ಬಂಧನ
ಬೆಂಗಳೂರು : ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಚೈನ್ ಎಗರಿಸ್ತಿದ್ದ ಖದೀಮರನ್ನ ಬಂಧಿಸುವಲ್ಲಿ ಹನುಮಂತನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಂಗಲ್ಯ ಸರ ಕದ್ದು ಕರಾರಿಯಾಗಿದ್ದ ವರದರಾಜು ಹಾಗೂ ರಾಜೇಶ್ ಎಂಬ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಫೆ.14 ರಂದು ಶ್ರೀ ನಗರದ ಕಾಳಪ್ಪ ಬ್ಲಾಕ್ ನಲ್ಲಿ ಆರೋಪಿಗಳು ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು.
ಸರ ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು..
ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಷ್ಯಾವಳಿ ಆದರಸಿ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.








