ಕೊರೊನಾ ಹರಡಿದ್ದು ವುಹಾನ್ ಲ್ಯಾಬ್ ನಿಂದ… ತನಿಖೆಗೆ ಸೂಚಿಸಿದ ಅಮೆರಿಕಾ..ಕೆಂಡಕಾರಿದ ‘ಛೀ’ನಾ..!
ಕೊರೊನಾ ವೈರಸ್ ಹರಡಿದ್ದು, ಎಲ್ಲಿಂದ ಎಂಬ ಹಲವಾರು ವಾದ ವಿವಾದಗಳು ಚರ್ಚೆಗಳು ಆಗಾಗ ನಡೆಯುತ್ತಲೇ ಇರುತ್ತವೆ.. ಅದು ಅಲ್ಲದೇ ಇತ್ತೀಚೆಗೆ ಚೀನಾ ವಿರುದ್ಧ ಅನೇಕ ಸಾಕ್ಷಿಗಳು ಲಣ್ಯವಾಗಿದ್ದು, ಚೀನಾದ ವುಹಾನ್ ನ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗ್ತಿದೆ.. ಇತ್ತೀಚೆಗಷ್ಟೇ 2019 ಅಂದ್ರ ಕೋವಿಡ್ ಆರಂಭದಲ್ಲೇ ವುಹಾನ್ ನ ಮೂವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಂಬ ಅಂಶ ಬಹಿರಂಗವಾಗಿತ್ತು.. ಇದಾದ ನಂತರ ಚೀನಾದ ಮೇಲೆ ಅನುಮಾನಗಳ ಮತ್ತಷ್ಟು ಹೆಚ್ಚಾಗಿದ್ದವು..
ಮತ್ತೊಂದೆಡೆ ಚೀನಾದ ವಿರುದ್ಧ ಅನುಮಾನಗಳನ್ನ ಹೊರಹಾಕುತ್ತಲೇ ತನಿಖೆಗೆ ಆಗ್ರಹಿಸುತ್ತಿರುವ ಅಮೆರಿಕಾ ವಿರುದ್ಧ ಚೀನಾ ಕೆಂಡ ಕಾರ್ತಿದೆ.. ಅಲ್ಲದೇ 2015 – 2016ರಲ್ಲೇ ಚೀನಾ ಕೊರೊನಾ ಮಾಹಾಮಾರಿಯ ಬಗ್ಗೆ ಚರ್ಚೆ ನಡೆಸಿತ್ತು… ಜೆನೆಟಿಕ್ ವಾರ್ ನ ತಯಾರಿ ನಡೆಸಿತ್ತು ಎಂದು ಅಮೆರಿಕಾ ವರದಿ ಮಾಡಿತ್ತು.. ಇದ್ರಿಂದಾಗಿ ಅಮೆರಿಕಾ ವಿರುದ್ಧ ಚೀನಾ ಆಕ್ರೋಶ ಹೆಚ್ಚಾಗಿದೆ..
ಇನ್ನೂ ಕೊರೊನಾ ಮಾಹಾಮಾರಿ ವುಹಾನ್ ನ ಮಾಂಸ ಮಾರುಕಟ್ಟೆಯಿಂದ ಹರಡಿರಬಹುದು ಆದ್ರೆ ಅದನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೆ ಚೀನಾ ತಯಾರಿಲ್ಲ. ಈವರೆಗೂ ಆ ಬಗ್ಗೆ ವಾದ ಮಾಡುತ್ತಲೇ ಬಂದಿದೆ.. ಜೊತೆಗೆ ಇದು ಮಾಂಸ ಮಾರುಕಟ್ಟೆಯಿಂದ ಹರಡಿರುವ ಸಾಧ್ಯತೆಯಿದೆ ಆದ್ರೆ ವುಹಾನ್ ನ ಲ್ಯಾಬ್ ನಿಂದ ಹರಡಿಲ್ಲ ಎನ್ನುತ್ತಲೇ ವಾದಿಸಿದೆ.. ಆದ್ರೆ ಅಮೆರಿಕಾವು ಇದನ್ನ ಒಪ್ಪೋದಕ್ಕೆ ತಯಾರಿಲ್ಲ.
ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಿಂದ ಬಂದಿದೆ ಎಂಬುದರ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುವ ಅಮೆರಿಕದ ಪ್ರಯತ್ನಗಳನ್ನು ಚೀನಾ ಖಂಡಿಸಿದೆ. ವೈರಾಣುವಿನ ಮೂಲಕ್ಕೆ ಸಂಬಂಧಿಸಿದ ಗುಪ್ತಚರ ವರದಿಗಳನ್ನು ಬಹಿರಂಗಪಡಿಸಲು ತಾವು ಇಚ್ಛಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದರು. ಅಮೆರಿಕದ ಅಧ್ಯಕ್ಷರ ಈ ನಡೆಗೆ ಆಕ್ರೋಶಗೊಂಡಿರುವ ಚೀನಾ, ಅಮೆರಿಕದ ವಿರುದ್ಧ ಕಿಡಿಕಿಡಿಯಾಗಿದೆ. ಅಮೆರಿಕವು ‘ರಾಜಕೀಯ ಮಾಡುತ್ತಿದೆ ಮತ್ತು ಆಪಾದನೆ ಹೊರಿಸುತ್ತಿದೆ,’ ಎಂದು ಚೀನಾ ವಿದೇಶಾಂಗ ಇಲಾಖೆಯು ಟೀಕಿಸಿದೆ. ಅಲ್ಲದೆ, ಕೊರೊನಾ ವೈರಸ್‌ನ ಮೂಲ ವುಹಾನ್ ನಗರದ ವೈರಾಣು ಲ್ಯಾಬ್ ಎಂಬ ವಾದಗಳನ್ನು ಚೀನಾ ನಿರಾಕರಿಸಿದೆ.
ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡಾಗ, ಕೊರೊನಾ ವೈರಸ್ ಮೂಲದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸೋಂಕುಗೊಂಡ ಪ್ರಾಣಿಯಿಂದ ಮಾನವನಿಗೆ ವೈರಸ್ ಬಂದಿತೇ ಅಥವಾ ಲ್ಯಾಬ್‌ನಿಂದ ಹೊರ ಬಂದಿದ್ದೇ ಎಂಬುದರ ಕುರಿತು ವಿವರಣೆ ನೀಡುವಂತೆ ತಿಳಿಸಿದ್ದರು. ಇದರ ವರದಿಯನ್ನು ಇತ್ತೀಚೆಗೆ ಬೈಡನ್ ಅವರಿಗೆ ನೀಡಲಾಗಿದೆ. ಆದರೆ, ಬೈಡನ್ ಅವರು ಮತ್ತಷ್ಟು ಮಾಹಿತಿ ಕೇಳಿದ್ದಾರೆ,’ ಎಂದು ಅಮೆರಿಕ ಬುಧವಾರ ಹೇಳಿಕೆ ಬಿಡುಗಡೆ ಮಾಡಿತ್ತು.
ವೈರಸ್ ಮೂಲದ ಬಗ್ಗೆ ಈಗ ಅಮೆರಿಕದ ಗುಪ್ತಚರ ಏಜೆನ್ಸಿಗಳಲ್ಲಿ ಎರಡು ವಾದಗಳಿವೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಗುರುವಾರ ಹೇಳಿದೆ. ಪ್ರಾಣಿಯಿಂದ ಮನುಷ್ಯರಿಗೆ ಪ್ರಸರಣೆಗೊಂಡಿದ್ದು ಒಂದು ವಾದವಾದರೆ, ವುಹಾನ್ ಲ್ಯಾಬ್‌ನಿಂದ ಕೊರೊನಾ ಹೊರ ಬಂದಿದೆ ಎಂಬುದು ಒಂದು ವಾದವಾಗಿದೆ. ಆದರೆ, ಒಂದಕ್ಕಿಂತಲೂ ಇನ್ನೊಂದು ಹೆಚ್ಚು ಸೂಕ್ತ ಎಂದು ನಿರ್ಣಯಿಸಲು ಸಾಕಷ್ಟು ಮಾಹಿತಿ ಇಲ್ಲ ಎಂದು ಗುಪ್ತಚರ ಇಲಾಖೆ ಹೇಳಿದೆ.
ಈ ಎರಡೂ ವಾದಗಳಲ್ಲಿ ಯಾವುದಾದರೂ ಒಂದು ವಾದದ ಪರವಾಗಿ ನಿರ್ಣಾಯ ತಗೆದುಕೊಳ್ಳಲು ಅನುಕೂಲವಾಗುವಂಥ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಪ್ರಯತ್ನ ಮಾಡಿ ಎಂದು ಬೈಡನ್ ಏಜೆನ್ಸಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ವರದಿಗಳನ್ನು ಬಿಡುಗಡೆ ಮಾಡಲು ತಾವು ಇಚ್ಛಿಸಿರುವುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ. ವೈರಸ್ ಮೂಲವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಮೆರಿಕ ಮತ್ತು ಇತರ ದೇಶಗಳು ಕೈಗೊಳ್ಳುವ ಪ್ರಯತ್ನಗಳಿಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಗುರುವಾರ ಬೆಂಬಲ ವ್ಯಕ್ತಪಡಿಸಿದರು.
ಪ್ರಯೋಗಾಲಯದ ವಾದ ಕೋವಿಡ್–19 ಸಾಂಕ್ರಾಮಿಕದ ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ಚೀನಾದ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಭಾನುವಾರ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ಅದು ವರದಿ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಪ್ರಯೋಗಾಲಯದ ವಾದ ಮುನ್ನೆಲೆಗೆ ಬಂದಿದೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆ ಎಂದು ನಂಬಿರುವುದಾಗಿ ಅಧ್ಯಕ್ಷ ಬಿಡೆನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಅವರು ಈ ಹಿಂದೆ ಹೇಳಿದ್ದರು. ಆದರೆ, ಈಗ ಕೋವಿಡ್ -19 ಸ್ವಾಭಾವಿಕ ಎಂದು ತಾವು ನಂಬಿಲ್ಲ ಎಂದು ಹೇಳಿದ್ದಾರೆ. ವೈರಾಣುವಿನ ಮೂಲದ ಬಗ್ಗೆ ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಕ್ಸೇವಿಯರ್ ಬೆಕೆರಾ ಅವರು ಒತ್ತಾಯಿಸಿದರು. ಅದರ ಮರುದಿನವೇ ಬೈಡನ್ ಅವರ ಎರಡನೇ ಹಂತದ ತನಿಖೆಯ ಆದೇಶವೂ ಹೊರಬಿದ್ದಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.