ಗಡಿಯಲ್ಲಿ ಮತ್ತೆ ಚೀನಾ ಖ್ಯಾತೆ – ಭಾರತದ ಗಡಿಯೊಳಗೆ ನುಸುಳಿ ಬ್ರಿಡ್ಜ್ ಧ್ವಂಸ
ಲಡಾಖ್ : ಚೀನಾ ಹಾಗೂ ಪಾಕಿಸ್ತಾನ ಎರಡೂ ಮಹಾನ್ ಕಪಟಿ ದೇಶಗಳಿಗೆ ಭಾರತದ ಜೊತೆಗೆ ಖ್ಯಾತೆ ತೆಗೆಯದೇ ಹೋದ್ರೆ ಭಾರತದ ಗಡಿ ವಿಚಾರಕ್ಕೆ ಬಂದು ಮುಖಭಂಗ ಅನುಭವಿಸದೇ ಇದ್ರೆ ನೆಮ್ಮದಿಯ ನಿದ್ದೆ ಬರೋದಿಲ್ಲ ಅಂತ ಕಾಣುತ್ತೆ. ಒಂದೆಡೆ ಪಾಕಿಸ್ತಾನ ಕಾಶ್ಮೀರ ಕಾಶ್ಮೀರ ಅಂತ ಜಪ ಮಾಡ್ತಾ ಉಗ್ರರನ್ನ ಪೋಷಣೆ ಮಾಡುತ್ತಾ ತಮ್ಮ ದೇಶ ಭಿಕ್ಷುಕವಾಗ್ತಿದೆ ಅನ್ನೋದನ್ನ ಮರೆತಿದ್ರೆ, ಮತ್ತೊಂದೆಡೆ ಚೀನಾ ಲಡಾಕ್ ವಿಚಾರಕ್ಕೆ ಬಂದು ಈ ಹಿಂದೆ ಅವಮಾನ ಅನುಭವಿಸಿದ್ರು ಈಗಲೂ ನಮ್ಮ ಗಡಿ ಬಳಿ ಸುಳಿದಾಡುತ್ತಾ ಇದೆ.
ಅಷ್ಟೇ ಅಲ್ಲದೇ ಈಗ ಚೀನಾ ಸೈನಿಕರು ಮತ್ತೆ ಬಾರತವನ್ನ ಕೆಣಕಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸುಮಾರು 100 ಸೈನಿಕರು ಕುದುರೆ ಮೂಲಕ ಭಾರತದ ಉತ್ತರಾಖಂಡದ ಬಾರಹೋಟಿಗೆ ಪ್ರವೇಶಿಸಿ ಸುಮಾರು 3 ಗಂಟೆ ಕಾಲ ತಂಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ನಮಗೆ ಶಸ್ತ್ರಾಸ್ತ್ರಗಳನ್ನ ಪರೀಕ್ಷಿಸುವ ಹಕ್ಕಿದೆ ಎಂದ ಉತ್ತರ ಕೊರಿಯಾ..!
ಭಾರತೀಯ ರಕ್ಷಣಾ ಪಡೆಯ ಸೈನಿಕರು ಇಲ್ಲದೇ ಇರುವ ಹೊತ್ತಿನಲ್ಲಿ ಗಡಿಗೆ ಪ್ರವೇಶಿಸಿರುವ ಚೀನಾ ಸೇನೆ ಕಾಲು ಸೇತುವೆಯನ್ನು ನಾಶಪಡಿಸಿದೆ. ಬಳಿಕ ಅದೇ ವೇಳೆ ಐಟಿಬಿಪಿ ಪಡೆ ಬಂದಾಗ, ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು ಸ್ಥಳದಿಂದ ನರಿಗಳಂತೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಈ ರೀತಿ ಘಟನೆ ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಪೂರ್ವ ಲಡಾಕ್‍ನಲ್ಲಿ ಕಿರಿಕ್ ಮಾಡಿದ್ದ ಚೀನಿ ಸೈನಿಕರಿಗೆ ಭಾರತ ಸರಿಯಾಗಿಯೇ ಬಿಸಿ ಮುಟ್ಟಿಸಿತ್ತು. ಎರಡೂ ದೇಶಗಳು ಗಡಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿತ್ತು. ಹಲವು ಸುತ್ತಿನ ಮಾತುಕತೆಯ ಬಳಿಕ ಎರಡೂ ದೇಶಗಳು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದವು