‘ಛೀ’ನಾ ಪೈಶಾಚಿಕತೆ : ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರಿಂದ ಅತ್ಯಾಚಾರ..!
ಚೀನಾದ ಪೈಶಾಚಿಕತೆ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಂತಹ ಕ್ರೂರ ರಾಷ್ಟ್ರ ಅಂತಾನೆ ಹೇಳಬಹುದು. ಇದೀಗ ಕ್ರೂರತ್ವದ ಪರಮಾವಧಿಯನ್ನೇ ಮೀರಿ ರಾಕ್ಷಸರಂತೆ ಅಲ್ಲಿನ ಸೈನಿಕರು ವರ್ತಿಸುತ್ತಿರೋದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವರದಿಗಳು ಪ್ರಕಟವಾಗಿವೆ. ಹೌದು ಚೀನಾದ ಪೂರ್ವ ವಲಯದಲ್ಲಿರೋ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಗರ್ ಮತ್ತು ಇತರೆ ಮುಸ್ಲಿಂ ಸಮುದಾಯದ ಮಹಿಳೆಯರ ಮೇಲೆ ಅಲ್ಲಿನ ಸೈನಿಕರು ನಿರಂತರವಾಗಿ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದಾರೆ ಎಂದು ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ ಮಾಡಿರೋ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಜೊತೆಗೆ ಚೀನಾ ವಿರುದ್ಧ ಆಕ್ರೋಶವನ್ನ ಮತ್ತಷ್ಟು ಹೆಚ್ಚಿಸಿದೆ.
ವೈದ್ಯಲೋಕದ ಪವಾಡ : ವ್ಯಕ್ತಿಗೆ ಬೇರೆಯ ಮುಖ, ಕೈಗಳ ಜೋಡಣೆ..!
ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಗರ್ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗ್ತಿದೆ. ಅಲ್ಲಿ ಈ ಹಿಂದೆ ಬಂಧಿಯಾಗಿದ್ದ ಕೆಲವರು ಮತ್ತು ಭದ್ರತಾ ಸಿಬ್ಬಂದಿ ಇಂಥಹ ಘಟನೆಗಳನ್ನು ಕಣ್ಣಾರೆ ಕಂಡಿರೋದಾಗಿ ಹೇಳಿಕೊಂಡಿದ್ದಾರೆ. ಮಹಿಳೆಯರನ್ನು ಪ್ರತಿ ರಾತ್ರಿ ಬಂಧಿಸಿಟ್ಟ ಸೆಲ್ ನಿಂದ ಹೊರಗೆಳೆದು ಅತ್ಯಾಚಾರ ಮಾಡ್ತಿದ್ದಾರೆ. ರೇಪ್ ವೇಳೆ ಚೈನೀಸ್ ಮಾಸ್ಕ್ ಧರಿಸಿಕೊಳ್ತಿದ್ರು. ಅದ್ರಲ್ಲೂ ಕೆಲ ಮಹಿಳೆಯರಂತೂ ಸೆಲ್ ನಿಂದ ಎಳೆದುಕೊಂಡು ಹೋದ ಬಳಿಕ ವಾಪಸ್ ಬಂದೇ ಇಲ್ಲ ಎಂದು ಈ ಹಿಂದೆ ಬಂಧಿತರಾಗಿದ್ದವರು ಮಾಹಿತಿ ನೀಡಿದ್ದಾರೆ.
ಪೊಲಿಯೋ ಲಸಿಕೆ ಬದಲು ಸ್ಯಾನಿಟೈಸರ್ : ಪ್ರಕರಣಕ್ಕೆ ಟ್ವಿಸ್ಟ್ : ವೈದ್ಯನ ಕೃತ್ಯದ ಅಸಲಿಯತ್ತು ಬಯಲು..!
ಇನ್ನೂ ಬಹಳ ಸಮಯದ ಹಿಂದಿನಿಂದಲೂ ಈ ಭಾಗದಲ್ಲಿ ಮುಸ್ಲಿಮರ ಮೇಲೆ , ಹಾಗೂ ಇತರೇ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹಿಂಸೆ ನಡೆಯುತ್ತಲೇ ಇದೆ ಎಂದು ಅನೇಕರು ತಿಳಸಿದ್ದಾರೆ. ಅನೇಕ ಬಾರಿ ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದು ಚೀನಾ ವಿರುದ್ಧ ಛೀಮಾರಿ ಹಾಕಿದ್ದಾರೆ. ಈ ಬಾಗದಲ್ಲಿ ಈಗಾಗಲೇ ಅನೇಕರನ್ನ ಸಾಯಿಸಲಾಗಿದೆ. ಆದ್ರೂ ಅಲ್ಲಿ ಏನೂ ನಡದೇ ಇಲ್ಲ ಅನ್ನೋ ಹೇಳಿಕೆಗಳನ್ನ ನೀಡುತ್ತಿರುವ ಚೀನಾ ಸಾಚಾ ರೀತಿ ವರ್ತಿಸುತ್ತಿದೆ.
ಫ್ರೀ ವೈ-ಫೈ ರೋಟರ್ : ಹೊಸ ಗ್ರಾಹಕರನ್ನ ಸೆಳೆಯಲು TATA SKY ಮಾಸ್ಟರ್ ಪ್ಲಾನ್..!
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ, ಇದು ತುಂಬಾ ಆಘಾತಕಾರಿ ವಿಚಾರ.. ಚೀನಾ ಕ್ಸಿಂಜಿಯಾಂಗ್ನಲ್ಲಿ ಅಂತಾರಾಷ್ಟ್ರೀಯ ತನಿಖಾ ತಂಡದ ಸ್ವತಂತ್ರ ತನಿಖೆಗೆ ಅವಕಾಶ ಮಾಡಿಕೊಡಬೇಕು ಅಂತ ಆಗ್ರಹಿಸಿದೆ. ಆದ್ರೆ ವಿಪರರ್ಯಾಸ ದುರ್ದೈವಕಾರಿ ವಿಚಾರವೆಂದ್ರೆ ಭಾಹಶಃ ವಿಶ್ವದ ಎಲ್ಲಾ ರಾಷ್ಟ್ರಗಳು ಚೀನಾವನ್ನ ಟೀಕೆ ಮಾಡ್ತಿವೆ. ಅಲ್ಲಿನ ಜನರ ರಕ್ಷಣೆಗೆ ಆಗ್ರಹಿಸುತ್ತಿವೆ. ತನಿಖೆಗೆ ಒತ್ತಾಯಿಸುತ್ತಿವೆ. ಚೀನಾ ನಡೆಗೆ ಛೀ ಥೂ ಅಂತಿವೆ. ಆದ್ರೆ ಚೀನಾದ ಅಪ್ಪಟ ಮಿತ್ರ ರಾಷ್ಟ್ರ , ಮುಸ್ಲಿಂ ರಾಷ್ಟ್ರಗಳಾಗಿರೋ ಪಾಕಿಸ್ತಾನ, ಟರ್ಕಿ ಸೇರಿದಂತೆ ಯಾವ ಮುಸ್ಲಿಂ ರಾಷ್ಟ್ರಗಳು ಸಹ ತುಟಿ ಬಿಚ್ಚುತ್ತಿಲ್ಲ ಅನ್ನೋದೇ ದೊಡ್ಡ ಪ್ರಶ್ನೆ.
ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ , ಸೇನಾ ಸರ್ಕಾರ: ಹೇಗಾಯ್ತು ,ಯಾಕಾಯ್ತು : ಸಂಪೂರ್ಣ ಮಾಹಿತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel