ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರು ಬದಲಾಯಿಸಿದ ಚೀನಾ ನಿರ್ಧಾರ ತಿಸ್ಕರಿಸಿದ ಭಾರತ
ಅರುಣಾಚಲ ಪ್ರದೇಶ : ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರು ಬದಲಾಯಿಸಿದ ಚೀನಾ ನಿರ್ಧಾರವನ್ನ ಭಾರತ ಸರ್ಕಾರ ತಿರಸ್ಕರಿಸಿದೆ.. ಚೀನಾ ಅರುಣಾಚಲಪ್ರದೇಶದ 15 ಸ್ಥಳಗಳ ಹೆಸರು ಬದಲಿಸಿದ್ದ ನಿರ್ಣಯವನ್ನು ಭಾರತವು ತಿರಸ್ಕರಿಸಿದೆ.
ಅಲ್ಲದೇ ಅರುಣಾಚಲ ಪ್ರದೇಶವು ಈಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಮುಂದೆಯೂ ಆಗಿರುತ್ತದೆ. ಬೇರೆ ಹೆಸರುಗಳನ್ನು ಇಡುವುದರಿಂದ ಆ ಸತ್ಯವನ್ನು ಬದಲಿಸಲು ಸಾಧ್ಯಾಗುವುದಿಲ್ಲ ಎಂದು ತಿರುಗೇಟು ನೀಡಿದೆ.
ಝಂಗಾಂಗ್ ಅಥವಾ ದಕ್ಷಿಣ ಷಿಝಾಂಗ್‌ನ (ಟಿಬೆಟ್ ಸ್ವಾಯತ್ತ ಪ್ರದೇಶದ) 15 ಸ್ಥಳಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರು ಇರಿಸಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು.
ಇದರ ಬೆನ್ನಲ್ಲೇ ಭಾರತ ಪ್ರತಿಕ್ರಿಯಿಸಿ, ಇಂತಹವುಗಳನ್ನು ನಾವು ನೋಡಿದ್ದೇವೆ. ಚೀನಾ, ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಿಸುವ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. 2017 ರಲ್ಲಿಯೂ ಹೆಸರು ಬದಲಾವಣೆಗೆ ಪ್ರಯತ್ನಿಸಿತ್ತು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಅಲ್ಲದೇ ಅರುಣಾಚಲ ಪ್ರದೇಶವು ಈಗಲೂ ಹಾಗೂ ಇನ್ನು ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ. ರಾಜ್ಯದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವುದರಿಂದ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಪೂರ್ವ ಲಡಾಖ್ ನ ಗಡಿಯಲ್ಲಿ ಭಾರತ–ಚೀನಾ ಸೈನಿಕರ ನಡುವೆ 20 ತಿಂಗಳಿಂದ ಸಂಘರ್ಷ ನಡೆಯುತ್ತಿದ್ದು, ಅದರ ನಡುವಲ್ಲಿಯೇ ಚೀನಾ ಈ ಕ್ರಮ ಕೈಗೊಂಡಿದೆ. ಇದು ಭಾರತೀಯರನ್ನ ಕೆರಳಿಸಿದೆ..








