National : ‘ಗಡಿಯಲ್ಲಿ ಚೀನಾ ಭಾರತದ ನಡುವಿನ ಸಂಘರ್ಷವು ಕಳೆದ 4 ದಶಕಗಳಲ್ಲಿ ಹೀನಾಯ ಸ್ಥಿತಿ ತಲುಪಿದೆ’
ಗಡಿ ಬಿಕ್ಕಟ್ಟು ಶಮನದ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಸೇನಾ ಅಧಿಕಾರಿಗಳ ಮಧ್ಯೆ ಉನ್ನತ ಹಂತದ ಸಭೆ ಮಾ.11ರಂದು ಸಭೆ ನಿಗದಿಯಾಗಿದೆ..
ಈ ನಡುವೆ ವಾಸ್ತವ ಗಡಿ ನಿಯಂತ್ರಣ ಭಾಗದಲ್ಲಿ ಚೀನಾ ಭಾರತದ ನಡುವಿನ ಸಂಘರ್ಷವು ಕಳೆದ 4 ದಶಕಗಳಲ್ಲಿ ಹೀನಾಯ ಸ್ಥಿತಿ ತಲುಪಿದೆ ಎಂದು ಅಮೆರಿಕದ ಅಡ್ಮಿರಲ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಈ ಭಾಗದಲ್ಲಿ ಚೀನಾದ ಆಕ್ರಮಣಗಳು ಹೆಚ್ಚಾಗಿ ನಡೆದಿವೆ ಎಂದು ಅಮೆರಿಕದ ಸಂಸದರಿಗೆ ಅಮೆರಿಕದ ಇಂಡೊ-ಪೆಸಿಫಿಕ್ ಕಮಾಂಡ್ ಅಡ್ಮಿರಲ್ ಜಾನ್ ಅಕ್ವಿಲಿನೊ ಅವರು ತಿಳಿಸಿರೋದಾಗಿ ತಿಳಿದುಬಂದಿದೆ.








