ಮಕ್ಕಳನ್ನ ಮಾಡಿಕೊಳ್ಳಿ ಎಂದು 23.5 ಲಕ್ಷ ರೂಪಾಯಿ ಆಫರ್ ಕೊಟ್ಟ ಚೀನಾ..!
ಚೀನಾ : ಒಂದೆಡೆ ಭಾರತ.. ಇಡೀ ವಿಶ್ವದಲ್ಲೇ ಜನಸಂಖ್ಯೆ ವಿಚಾರದಲ್ಲಿ 2ನೇ ಸ್ಥಾನದಲ್ಲಿದೆ.. ಹೀಗಾಗಿ ನಮ್ಮ ದೇಶದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ಳುವ ವಿಚಾರದಲ್ಲಿ ಸರ್ಕಾರ ರೂಲ್ಸ್ ರೆಗ್ಯುಲೇಷನ್ಸ್ ತಂದಿದ್ದು , ಜಾಗೃತಿ ಅಭಿಯಾನವೂ ನಡೆಯುತ್ತಿರುತ್ತೆ.. ನಮ್ಮಲ್ಲಿ Population Control ಮಾಡಲಿಕ್ಕೆ ಸರ್ಕಾರ ನಾನಾ ಪ್ರಯತ್ನಗಳನ್ನ ಮಾಡ್ತಿದೆ..
ಆದ್ರೆ ಮತ್ತೊಂದ್ ಕಡೆ ಕೊರೊನಾ ಪಿತಾಮಹ ಚೀನಾ… ಇಡೀ ವಿಶ್ವದಲ್ಲಿ ಕೊರೊನಾ ಹಂಚಿದ್ರಲ್ಲೂ ನಂಬರ್ ಒನ್, ನಕಲು ಮಾಡೋದ್ರಲ್ಲೂ ನಂಬರ್ ಒನ್ , ಬೇರೆ ದೇಶಗಳ ವಿರುದ್ಧ ಕತ್ತಿ ಮಸೆಯೋದ್ರಲ್ಲೂ ನಂಬರ್ ಒನ್.. ಜನಸಂಖ್ಯೆ ವಿಚಾರದಲ್ಲೂ ನಂಬರ್ ಒನ್ .. ಹೀಗೆರುವಾಗ ಜನಸಂಖ್ಯೆ ನಿಯಂತ್ರಣದ ಬಗ್ಗೆ ಯೋಚಿಸೋದನ್ನ ಬಿಟ್ಟು ಮಕ್ಕಳನ್ನ ಮಾಡ್ಕೊಳ್ಳಿ ಅಂತ ಒತ್ತಡವೂ ಹೇರ್ತಿದೆ.. ಮಕ್ಕಳನ್ನ ಮಾಡಿಕೊಳ್ಳೋರಿಗೆ ಬಂಪರ್ ಆಫರನ್ನೂ ನೀಡ್ತಿದೆ..
ಹೌದು.. ಚೀನಾ ಸರ್ಕಾರ ಕೈಗೊಂಡಿದ್ದ ಜನಸಂಖ್ಯಾ ಸ್ಫೋಟ ತಡೆಯ ಪರಿಣಾಮದಿಂದಾಗಿ ಚೀನಾದಲ್ಲಿ ಜನಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಇತ್ತೀಚಿನ ಜನಗಣತಿಯಲ್ಲಿ ತಿಳಿದುಬಂದಿದೆ. ಹೀಗಾಗಿ ಪುನಃ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರ ಮಕ್ಕಳನ್ನು ಮಾಡಿಕೊಳ್ಳುವ ದಂಪತಿಗೆ ಸಾಲ ಸೌಲಭ್ಯ ನೀಡುವ ಯೋಜನೆ ತಂದಿದೆ.
ಕಳೆದ ಅಗಸ್ಟ್ ನಲ್ಲಿ ಚೀನಾ ಜನಸಂಖ್ಯಾ ತಡೆಗೆ ಕೈಗೊಂಡಿದ್ದ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಿತ್ತು. ಆದರೂ ಜಿಲಿನ್, ಲಿಯಾನಿಂಗ್ ಮತ್ತು ಹೈಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ದುಡಿಯುವ ಕೈಗಳ ಸಮಸ್ಯೆ ಎದ್ದು ಕಾಣುತ್ತಿದೆ. ಇದರಿಂದಾಗಿ ವಿಶೇಷ ಯೋಜನೆಯೊಂದನ್ನು ರೂಪಿಸಿ ಯುವಜನಾಂಗವನ್ನು ಹೆಚ್ಚಿಸಲು ತೀರ್ಮಾನ ತೆಗೆದುಕೊಂಡಿದೆ.
ಈ ಯೋಜನೆಯ ಪ್ರಕಾರ, ಮದುವೆಯಾಗಿ ಮಕ್ಕಳನ್ನು ಪಡೆಯುವ ದಂಪತಿಗೆ ವಿಶೇಷ ನೆರವಿನ ಪ್ಯಾಕೇಜ್ ಘೋಷಣೆ ಮಾಡಿದೆ. ಈಶಾನ್ಯ ಚೀನಾದ ಜಿಲಿಂಗ್ ಪ್ರಾಂತ್ಯದ ಜನಸಂಖ್ಯೆ ಇತರ ಎಲ್ಲಾ ಪ್ರಾಂತ್ಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಇಲ್ಲಿ ಎಲ್ಲಿ ನೋಡಿದರೂ ಹೆಚ್ಚಾಗಿ ವೃದ್ಧರೇ ಕಾಣಿಸಿಕೊಳ್ಳುತ್ತಿದ್ದಾರೆ. ದುಡಿಯುವ ಯುವ ಜನಾಂಗ ವಿರಳವಾಗಿದೆ. ಇದರಿಂದಾಗಿ ಚೀನಾ ಸರ್ಕಾರ ಜನತೆಗೆ ವಿಶೇಷ ಯೋಜನೆಯೊಂದನ್ನು ಘೋಷಿಸಿದೆ.
ಮಕ್ಕಳನ್ನು ಹೆತ್ತರೆ ಖರ್ಚು ಹೆಚ್ಚು ಎನ್ನುವ ದಂಪತಿಗಾಗಿ ಈ ಯೋಜನೆ ಜಾರಿಯಾಗಿದೆ. ಇಲ್ಲಿ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ಮಕ್ಕಳನ್ನು ಹೊಂದುವ ದಂಪತಿಗೆ ಸುಮಾರು 23.5 ಲಕ್ಷ ರೂ. ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದೆ. ಹೆಚ್ಚು ಮಕ್ಕಳನ್ನು ಹೊಂದಿದಷ್ಟೂ ಸರ್ಕಾರ ಖುಷಿ ಪಡುತ್ತದೆ. ಜೊತೆಗೆ ಅವರಿಗಾಗಿ ವಿಶೇಷ ರಿಯಾಯಿತಿಯನ್ನು ನೀಡಲಿದೆ ಎಂದು ಜಿಲಿನ್ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಹೊಂದುವ ಮಕ್ಕಳ ಆಧಾರದ ಮೇಲೆ ಕಮ್ಮಿ ಬಡ್ಡಿ ದರದಲ್ಲಿ ಬ್ಯಾಂಕ್ ಗಳಿಂದ ಸಾಲ ಒದಗಿಸಲಾಗುವುದು. 2 ಅಥವಾ 3 ಮಕ್ಕಳನ್ನು ಹೊಂದುವ ದಂಪತಿ ವ್ಯಾಪಾರವನ್ನು ಆರಂಭಿಸುವುದಾದರೆ ಅವರಿಗೆ ರಿಯಾಯಿತಿ ನೀಡಲಾಗುತ್ತದೆ ಎಂದೂ ಕೂಡ ತಿಳಿಸಲಾಗಿದೆ.
ಈಗಾಗಲೇ ಮಹಿಳಾ ನೌಕರರ ತಾಯ್ತನದ ರಜೆ ಅವಧಿಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಪಿತೃತ್ವ ರಜೆಯನ್ನು ತೆಗೆದುಕೊಳ್ಳುವ ಪದ್ಧತಿ ಅನೇಕ ಪ್ರಾಂತ್ಯದಲ್ಲಿ ಇದೆ. ಮಹಿಳೆಯರಿಗೆ 180 ದಿನ ಹಾಗೂ ಪುರುಷರಿಗೆ 25 ದಿನ ರಜೆಯನ್ನು ನೀಡಲಾಗುತ್ತದೆ. ಇದರ ಜೊತೆಗೆ ವರ್ಷದಲ್ಲಿ 20 ದಿನ ಪೋಷಕರ ರಜೆಯನ್ನು ಪಡೆಯಬಹುದಾಗಿದೆ ಎನ್ನಲಾಗಿದೆ. ಆದ್ರೆ ಸರ್ಕಾರದ ಮನವಗೂ , ಒತ್ತಡಕ್ಕೂ ಅಲ್ಲಿನ ಜನರು ತಲೆ ಕೆಡಿಸಿಕೊಳ್ತಿಲ್ಲ ಮಕ್ಕಳ ಜೊತೆ ಸಾಲದ ಹೊರೆ ನಮಗೆ ಬೇಕಿಲ್ಲ ಎಂದು ತಿರಸ್ಕರಿಸಿದ್ದಾರೆ ಎನ್ನಲಾಗ್ತಿದೆ..