ವುಹಾನ್ ಕರೊನಾ ವರದಿ : ಚೀನಾದ ಕರ್ಮಕಾಂಡ ಬಯಲು ಮಾಡಿದ್ದಕ್ಕೆ ಪತ್ರಕರ್ತೆಗೆ ಇದೆಂಥಾ ಶಿಕ್ಷೆ..!
ಚೀನಾ: ಚೀನಾದಿಂದ ಇಡೀ ವಿಶ್ವಕ್ಕೆ ಹಬ್ಬಿ ಕೋಟ್ಯಾಂತರ ಜನರ ಜೀವ ಕಸಿದ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ವರದಿ ಮಾಡಿದ್ದ ಚೀನಾದ ಪತ್ರಕರ್ತೆ ಗೆ ಚೀನಾ ಸರ್ಕಾರ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜಗಳ ಮತ್ತು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಚೋದಿಸಿದ ಆರೋಪದ ಮೇಲೆ ಪತ್ರಕರ್ತೆಗೆ ಚೀನಾ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸಿಎಂ ಕುರ್ಚಿ ಹೋದ್ರೂ ಕೇರ್ ಮಾಡಲ್ಲ.. ಖುರ್ಚಿಗೆ ಅಂಟಿಕೊಂಡು ಕುಳಿತಿಲ್ಲ : ನಿತೀಶ್ ಕುಮಾರ್..!
37 ವರ್ಷದ ಜಾಂಗ್ ಫೆಬ್ರವರಿಯಲ್ಲಿ ವುಹಾನ್ ನಗರದಿಂದ ನೇರ ವರದಿ ನೀಡುವ ಪ್ರಯತ್ನ ಮಾಡಿದ್ದರು. ಅಲ್ಲಿನ ಪರಿಸ್ಥಿತಿ ಯಾವ ರೀತಿಯಲ್ಲಿದೆ, ಅಲ್ಲಿ ಕರೊನಾ ಬಂದವರಿಗೆ ಯಾವ ರೀತಿಯಲ್ಲಿ ಚಿತ್ರಹಿಂಸೆ ನೀಡಲಾಗ್ತಿದೆ. ವರದಿಗಾರರನ್ನ ಸದ್ದಿಲ್ಲದೆ ಹೇಗೆ ಹಲ್ಲೆ ಮಾಡಿ ಅವರನ್ನ ಸಾಯಿಸಲಾಗ್ತಿದೆ, ಅವರ ಬಾಯಿ ಹೇಗೆ ಮುಚ್ಚಿಸಲಾಗ್ತಿದೆ ಎಂಬುದರ ಕುರಿತಾಗಿ ವರದಿ ಮಾಡಿದ್ದರು. ಈ ಮೂಲಕ ಚೀನಾದ ಕರ್ಮಕಾಂಡ ಜಗತ್ ಜಾಹೀರಾಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಚೀನಾ ಸರ್ಕಾರದ ಅರಾಜಕತೆಯ ವಿಡಿಐಒಗಳು ಹರಿದಾಡಿದ್ದವು. ದಿಟ್ಟ ತನದಿಂದ ಸರ್ಕಾರದ ವಿರುದ್ಧ ವರದಿ ಮಾಡಿದ ಪತ್ರಕರ್ತೆಯನ್ನ ಇದೀಗ ಚೈನಾ ಸರ್ಕಾರ ಜೈಲಿಗಟ್ಟಿದೆ. ಇನ್ನೂ ಆಕೆ ವರದಿ ಮಾಡಿದ್ದ 3 ತಿಂಗಳಲ್ಲಿ ಆಕೆ ನಾಪತ್ತೆಯಾಗಿದ್ದ ಸುದ್ದಿ ಹೊರಬಿದ್ದಿತ್ತು. ಅದಾದ ಕೆಲ ದಿನಗಳ ನಂತರ ಆಕೆಯನ್ನ ಬಂಧಿಸಿರೋದಾಗಿ ಚೀನಾ ಸರ್ಕಾರ ತಿಳಿಸಿತ್ತು. ಇದೀಗ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel