ವಿಶ್ವಕ್ಕೆ ಕೊರೊನಾ ಸರಬರಾಜು ಮಾಡಿದ ಚೀನಾದಲ್ಲಿ ಮಹಾಮಾರಿಯ ಆತಂಕ – ಹಲವೆಡೆ ಲಾಕ್ ಡೌನ್..!
ಇಡೀ ವಿಶ್ವಕ್ಕೆ ಮಹಾಮಾರಿ ಹಬ್ಬಸಿ ಬಳಿಕ ನಾವು ಕೊರೊನಾ ಮುಕ್ತವಾಗಿದ್ದೀವಿ ನಮ್ಮಲ್ಲಿ ಒಂದೇ ಒಂದು ಕೇಸಿಲ್ಲ ಅಂತ ಬೀಗುತ್ತಾ ಇಡೀ ವಿಶ್ವದಕಲ್ಲಿ ನಡೆಯುತ್ತಿದ್ದ ಮಾರಣಹೋಮವನ್ನು ನೋಡುತ್ತ ಕೇಕೆ ಹಾಕ್ತಿದ್ದ ಕೊರೊನಾ ತವರು ಚೀನಾ ಈಗ ಮತ್ತೊಮ್ಮೆ ಕೋವಿಡ್ ನ ಅಲೆಯಲ್ಲಿ ಸಿಲುಕುತ್ತಿದೆ..
ಚೀನಾದಲ್ಲಿ 80 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಲಾಕ್‌ಡೌನ್ ಜಾರಿಯಾಗಿದೆ. ಪ್ರಯಾಣ ನಿರ್ಬಂಧ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಪೈಕಿ ಜಿಯಾಂಗ್ಸ್ ಪ್ರಾಂತ್ಯದ ಯಾಂಗ್‌ಜ್ಹೌನಲ್ಲಿ 58 ಪ್ರಕರಣಗಳು ವರದಿಯಾಗಿವೆ. ಜಿಯಾಂಗ್ಸ್ ಪ್ರಾಂತ್ಯದ ರಾಜಧಾನಿ ನಾನ್ಜಿಂಗ್‌ನಲ್ಲಿ ವಿಮಾನ ನಿಲ್ದಾಣದ ಹಲವು ಸಿಬ್ಬಂದಿಯಲ್ಲಿ ಸೋಂಕಿನ ಡೆಲ್ಟಾ ರೂಪಾಂತರ ತಳಿ ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಳ : ಮತ್ತೆ ಲಾಕ್ ಡೌನ್..?
ಇನ್ನುಳಿದ ಪ್ರಕರಣಗಳು ಹೈನಾನ್ ಬಳಿಯ ಆರು ಪ್ರಾಂತ್ಯದಲ್ಲಿ ಪತ್ತೆಯಾಗಿವೆ. ಇದರೊಂದಿಗೆ ನಾನ್ಜಿಂಗ್‌ಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 1,222ಕ್ಕೆ ಏರಿಕೆಯಾಗಿದೆ.ಈ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಯಾಣ ನಿರ್ಬಂಧ ಮತ್ತು ಕಠಿಣ ಲಾಕ್‌ಡೌನ್ ನಿಯಮಗಳನ್ನು ಹೇರಲಾಗಿದೆ.
ಚೀನಾದಲ್ಲಿ ದೇಶಿಯವಾಗಿ ಅಭಿವೃದ್ದಿಪಡಿಸಿದ ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗಿವೆ. ಈ ನಡುವೆಯೂ ಚೀನಾದಲ್ಲಿ ಈವರೆಗೆ ಲಸಿಕೆಯ 160 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಸ್ಥಳೀಯ ಪ್ರಕರಣಗಳನ್ನು ಹೊರತುಪಡಿಸಿ ವಿದೇಶದಿಂದ ಬಂದ 44 ವ್ಯಕ್ತಿಗಳಲ್ಲಿ ಶುಕ್ರವಾರ ಕೋವಿಡ್ ಪತ್ತೆಯಾಗಿದೆ. ಪ್ರಸ್ತುತ 1,370 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 34 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಚೀನಾದಲ್ಲಿ ಈವರೆಗೆ ಒಟ್ಟಾರೆ 93,498 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 4,636 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.. ಆದ್ರೆ ಚೀನಾ ನೀಡಿರುವ ಅಧಿಕೃತ ಮಾಹಿತಿ ಮೇಲೆ ಇಡೀ ವಿಶ್ವಕ್ಕೆ ನಂಬಿಕೆಯಿಲ್ಲ.. ಯಾಕಂದ್ರೆ ಮೂಲಗಳ ಪ್ರಕಾರ ಚೀನಾದಲ್ಲಿ ಕೋಟ್ಯಾಂತರ ಜನರು ಸಾವನಪ್ಪಿದ್ದಾರೆ ಎನ್ನಲಾಗಿದೆ.. ಆದ್ರೆ ಈ ಬಗ್ಗೆ ವರದಿ ಮಾಡಿದ ಕೆಲ ಜರ್ನಲಿಸ್ಟ್ ಗಳನ್ನ ಚೀನಾ ಜೈಲಿಗೂ ಹಾಕಿಸಿದೆ.. ಸರ್ಕಾರಿ ಮಾಧ್ಯಮಗಳಲ್ಲಿ ಚೀನಾ ಸರ್ಕಾರ ಕೊಟ್ಟಿದ್ದೇ ಅಪ್ ಡೇಟ್ಸ್ ಗಳನ್ನ ತೋರಿಸಲಾಗ್ತಿದೆ.. ಈ ಮೂಲಕ ಚೀನಾ ಇಡೀ ವಿಶ್ವದ ದಿಕ್ಕು ತಪ್ಪಿಸುತ್ತಿದೆ ಎಂದು ಹೇಳಲಾಗಿದೆ.. ಅಲ್ಲದೇ ಸತ್ತ ಕೋಟ್ಯಾಂತರ ಜನರ ಸಂಖ್ಯೆಯನ್ನ ಸರ್ಕಾರ ಮುಚ್ಚಿಡುವ ಪ್ರಯತ್ನ ಮಾಡ್ತಿದ್ದು, ವಿಶ್ವದ ಎದುರು ಉಳಿದ ಅಲ್ಪ ಸ್ವಲ್ಪ ಮಾನವನ್ನೂ ಕಳೆದುಕೊಳ್ಳಲು ತಯಾರಿಲ್ಲದೆ ಈ ರೀತಿ ಸುಳ್ಳು ಹೇಳ್ತಿದೆ ಅನ್ನೋದು ಅನೇಕರ ವಾದ.. ಜೊತೆಗೆ ಈ ವೈರಸ್ ಬಂದಿರೋದೆ ಚೀನಾದ ಲ್ಯಾಬ್ ನಿಂದ , ವುಹಾನ್ ಮಾರುಕಟ್ಟೆಯಿಂದಲ್ಲ ಅನ್ನೋದಕ್ಕೆ ಇತ್ತೀಚೆಗೆ ಚೀನಾ ಸಂಶೋಧಕರು ಸಾಕ್ಷಿಗಳನ್ನೂ ನೀಡಿದ್ದಾರೆ.. ಆದ್ರೂ ನಾಚಿಕೆಗೇಡಿನ ಚೀನಾ ಮಾತ್ರ ಇದನ್ನ ಒಪ್ಪಲು ಸಿದ್ಧವಿಲ್ಲ., ಆದ್ರೆ ಅಸಲಿಗೆ ಚೀನಾ ಇಡೀ ವಿಶ್ವದ ವಿರುದ್ಧ ಜೆನೆಟಿಕ್ ವಾರ್ ನ ಭಾಗವಾಗಿ ಕೊರೊನಾ ಅಸ್ತ್ರ ಪ್ರಯೋಗಿಸಿದೆ ಅನ್ನೋದು ಅಮೆರಿಕಾದ ವಾದವಾಗಿದೆ.