ಭಾರತೀಯ ಸೇನೆ ಬಂಧಿಸಿದ ಯೋಧನನ್ನ ವಾಪಸ್ ಕಳುಹಿಸುವಂತೆ ಚೀನಾ ಮನವಿ!
ಚೀನಾ ಮತ್ತು ಭಾರತದದ ಗಡಿ ಭಾಗದಲ್ಲಿ ಅನುಮಾನಾಸ್ಪದದವಾಗಿ ಸಿಕ್ಕಿದ್ದ ಚೀನಾ ಯೋಧನನ್ನ ಸದ್ಯ ಭಾರತೀಯ ಯೋಧರು ಬಂಧಿಸಿದ್ದಾರೆ. ಲೈನ್ ಆಫ್ ಕಂಟ್ರೋಲ್ನ ಭಾರತೀಯ ಗಡಿ ಪ್ರದೇಶ ಲಡಾಕ್ ನಲ್ಲಿ ಚೀನಾ ಯೋಧನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಯೋಧನನ್ನ ವಾಪಸ್ ಕಳುಹಿಸಿಕೊಡುವಂತೆ ಚೀನಾ ಭಾರತಕ್ಕೆ ಮನವಿ ಮಾಡಿಕೊಂಡಿದೆ.
ಫೆ.08 ರ ಬಳಿಕ WhatsApp ಡಿಲೀಟ್ ಆಗುತ್ತಾ..? New Privacy Policy Update ಬಗ್ಗೆ ಸಂಪೂರ್ಣ ಮಾಹಿತಿ
ಅಂದ್ಹಾಗೆ ಚೀನಾ ಯೋಧ ಚೀನಾ-ಭಾರತ ಗಡಿ ಪ್ರದೇಶಕ್ಕೆ ದಾರಿ ತಪ್ಪಿ ಬಂದಿರೋದಾಗಿ ಚೀನಾ ಮಿಲಿಟರಿಯು
ದೃಢಪಡಿಸಿದೆ. ಅಲ್ಲದೇ ತನ್ನ ಯೋಧನನ್ನು ತಕ್ಷಣ ಬಿಡುಗಡೆಗೊಳಿಸಿ ವಾಪಸ್ ಕಳುಹಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದೆ.
ಕತ್ತಲು ಮತ್ತು ಸಂಕೀರ್ಣ ಭೂಗೋಳದ ಕಾರಣ, ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಗಡಿ ರಕ್ಷಣಾ ಪಡೆಯ ಯೋಧರೊಬ್ಬರು ಶುಕ್ರವಾರ ಮುಂಜಾನೆ ಚೀನಾ-ಭಾರತ ಗಡಿಯಲ್ಲಿ ದಾರಿ ತಪ್ಪಿ ಬಂದಿದ್ದರು. ಆದರೆ ಅವರನ್ನ ಭಾರತೀಯ ಸೇನೆ ಬಂಧಿಸಿದೆ.. ಹೀಗಾಗಿ ದಯಮಾಡಿ ನಮ್ಮ ಯೋಧನನ್ನ ವಾಪಸ್ ಕಳುಹಿಸಬೇಕೆಂದು ಕೇಳಿಕೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel