ಚೀನಾದ ಪರ ಸುದ್ದಿ ಬಿತ್ತರಿಸಲು ಅಮೆರಿಕದ ಮಾಧ್ಯಮಗಳಿಗೆ ಲಕ್ಷಾಂತರ ಡಾಲರ್ ಸುರಿದ ಚೀನಾ
ಅಮೆರಿಕ: ಇಡೀ ವಿಶ್ವಕ್ಕೆ ಕೋವಿಡ್ ವೈರಸ್ ಹರಡಿರುವ ಚೀನಾ ಮಹಾನ್ ಕಪಟಿ ಅನ್ನೋ ವಿಚಾರ ಯಾರಿಗೂ ಗೊತ್ತಿರುವ ಸಂಗತಿಯೇನಲ್ಲ. ತಾನು ಗ್ರೇಟ್ , ತನ್ನ ದೇಶವೇ ಮಹಾನ್ ಎಮದು ತೋರಿಸಿಕೊಳ್ಲೋಕೆ ಚೀನಾ ಏನ್ ಬೇಕಾದ್ರೂ ಮಾಡುತ್ತೆ.. ಆದ್ರೆ ಇದೀಗ ಚೀನಾ ಅಮೆರಿಕ ಮಧ್ಯಮಗಳಿಗೆ ತನ್ನ ಪರ ಸುದ್ದಿ ಬಿತ್ತರಿಸಲು ಲಕ್ಷಾಂತರ ಡಾಲರ್ ಸುರಿದಿರುವ ವಿಚಾರ ಬೆಳಕಿಗೆ ಬಂದಿದ್ದು, ನರಿ ಚೀನಾ ಮತ್ತೊಮ್ಮೆ ವಿಶ್ವದ ಎದುರು ಮುಜುಗರಕ್ಕೀಡಾಗಿದೆ.
ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ಮಾಹಿತಿ ಅನ್ವಯ ಟೈಮ್, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಹಲವು ಮಾಧ್ಯಮಗಳಿಗೆ ಕಳೆದ 6 ತಿಂಗಳಿನಲ್ಲಿ ಲಕ್ಷಾಂತರ ಡಾಲರ್ ಹಣವನ್ನು ನೀಡಿದೆ. ಟೈಮ್ ಮ್ಯಾಗಜಿನ್ 7,00,000 ಡಾಲರ್, ಫೈನಾನ್ಶಿಯಲ್ ಟೈಮ್ಸ್ 3,71,577 ಡಾಲರ್, ಫಾರಿನ್ ಪಾಲಿಸಿ ಮ್ಯಾಗಜಿನ್ 2,72,000 ಡಾಲರ್, ಲಾಸ್ ಏಂಜಲೀಸ್ ಟೈಮ್ಸ್ ಗೆ 1 ದಶಲಕ್ಷ ಡಾಲರ್ ಹಣವನ್ನು ನೀಡಿದೆ.
ಚೀನಾದ ಪರವಾಗಿ ಸುದ್ದಿಯನ್ನು ಪ್ರಕಟ ಮಾಡಲು ಮಾಧ್ಯಮಗಳಿಗೆ ಹಣವನ್ನು ಪಾವತಿಸಲಾಗಿದೆ ಎಂದು ಜಸ್ಟೀಸ್ ಡಿಪಾರ್ಟ್ಮೆಂಟ್ ಹೇಳಿದೆ. ಜಾಹೀರಾತು ಸಂಬಂಧ ನ್ಯೂಯಾರ್ಕ್ ಟೈಮ್ಸ್ ಗೆ 50 ಸಾವಿರ ಡಾಲರ್, ಫಾರಿನ್ ಪಾಲಿಸಿಗೆ 2,40,000 ಡಾಲರ್ ಹಣವನ್ನು ಪಾವತಿಸಿದೆ. ಒಟ್ಟು ಚೀನಾ ಡೈಲಿ ಜಾಹೀರಾತು ಸಂಬಂಧ ಪತ್ರಿಕೆಗಳಿಗೆ ಒಟ್ಟು 1,10,02,628 ಡಾಲರ್ ಹಣ, ಟ್ವಿಟ್ಟರ್ ಗೆ 2,65,822 ಡಾಲರ್ ಹಣವನ್ನು ಪಾವತಿಸಿದೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..