ಕೊರೊನಾ ತವರಲ್ಲಿ ಹೊಸ ರೈಲು – ಗಂಟೆಗೆ 600 ಕಿ.ಮೀ ವೇಗದಲ್ಲಿ ಸಾಗುವ ಟ್ರೈನ್..!
ಕೊರೊನಾ ತವರು ಚೀನಾದಲ್ಲಿ ಹೊಸ ಸ್ಪೀಡ್ ರೈಲಿನ ಪರೀಕ್ಷಾರ್ಥ ಚಾಲನೆ ನಡೆಸಲಾಗಿದೆ.. ಇದು ಲೆವಿಟೇಟ್ಸ್ ಮ್ಯಾಗ್ಲೆವ್ ರೈಲು.. ಇದು ಗಂಟೆಗೆ 600 ಕಿ.ಮೀ. ವೇಗದಲ್ಲಿ ರೈಲು ಸಾಗಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದ್ದು, ಎಷ್ಟು ಸತ್ಯ ಅನ್ನೋದು ಮುಂದೆ ಗೊತ್ತಾಗಬೇಕಿದೆ..
ಚೀನಾ, ಸ್ವತಃ ಈ ಅತಿವೇಗದ ರೈಲನ್ನು ಅಭಿವೃದ್ಧಿಪಡಿಸಿದ್ದು, ಕರಾವಳಿ ನಗರಿ ಕಿಂಗ್ಡೋದಲ್ಲಿ ನಿರ್ಮಾಣ ಮಾಡಲಾಗಿದೆ. ವಿದ್ಯುತ್-ಕಾಂತೀಯ ಬಲದಿಂದ ಚಲಿಸುವ ಲೆವಿಟೇಟ್ಸ್ ಮ್ಯಾಗ್ಲೆವ್ ರೈಲು ಪ್ರಸ್ತುತ ಬಳಕೆಯಲ್ಲಿರುವ ರೈಲುಗಳ ಪೈಕಿ ಗರಿಷ್ಠ ವೇಗದ ರೈಲಾಗಿದೆ. ಮುಂದೆ ಶಾಂಘೈ ಮತ್ತು ಚೆಂಗ್ಡು ಪ್ರದೇಶಗಳಲ್ಲಿ ಕೂಡ ಚೀನಾ ಮ್ಯಾಗ್ಲೆವ್ ರೈಲು ಸೇವೆ ಪರಿಶೀಲಿಸಲಿದೆ. ಗಂಟೆಗೆ 600 ಕಿಮೀ. ವೇಗದಲ್ಲಿ ಬೀಜಿಂಗ್‌ನಿಂದ ಶಾಂಘೈಗೆ ತಲುಪಲು ಮ್ಯಾಗ್ಲೆವ್ ರೈಲಿನಲ್ಲಿ 2.5 ಗಂಟೆ ಸಾಕಾಗುತ್ತದೆ. ಈ ಎರಡು ನಗರಗಳ ನಡುವೆ 1,000 ಕಿ.ಮೀ. ಅಂತರವಿದೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..