‘ರೆಡ್ ಡ್ರ್ಯಾಗನ್’ ಗೆ ಮತ್ತೆ ಬಿಸಿ ಮುಟ್ಟಿಸಿದ ‘ವಿಶ್ವದ ದೊಡ್ಡಣ್ಣ’ : ಚೈನಾದ 8 ಆಪ್ ಗಳು ಬ್ಯಾನ್..!
ಅಮೆರಿಕಾ: ಕೆಂಪು ಡ್ರ್ಯಾಗನ್ ಚೀನಾದ ಅನೇಕ ಆಪ್ ಗಳನ್ನ ಬ್ಯಾನ್ ಮಾಡಿ ಆರ್ಥಿಕವಾಗಿ ಭಾರತ ಸಮರ ಸಾರಿದೆ. ಇದರ ಜೊತೆಗೆ ಅಮೆರಿಕಾ ಸಹ ಚೀನಾ ವಿರುದ್ಧ ಸಿಡಿದೆದ್ದಿದೆ. ಹೌದು ಈ ಹಿಂದೆ ಕೆಲ ಚೀನೀ ಆಪ್ ಗಳನ್ನ ಅಮೆರಿಕಾ ಬ್ಯಾನ್ ಮಾಡಿತ್ತು.. ಇದೀಗ ಮತ್ತೆ ಚೀನಾಗೆ ಬಿಸಿ ಮುಟ್ಟಿಸಿರುವ ಅಮೆರಿಕಾ ಚೀನಾದ 8 ಸಾಫ್ಟ್ ವೇರ್ ಅಪ್ಲಿಕೇಷನ್ ಗಳಿಗೆ ನಿಷೇಧ ಹೇರಿದೆ.
ಕಳ್ಳಿಗೆ ನೆರವಾದ ಪೊಲೀಸ್ : ಕದ್ದ ವಸ್ತುಗಳಿಗೆ ಹಣ ಪಾವತಿ..!
ಈ ಕುರಿತು ಆಡಳಿತಾತ್ಮಕ ಆದೇಶ ಹೊರಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಯಂಟ್ ಗ್ರೂಪ್ ನ ಅಲಿಪೆ ಸೇರಿದಂತೆ 8 ಸಾಫ್ಟ್ ವೇರ್ ಆಪ್ ಗಳಿಗೆ ನಿಷೇಧ ಹೇರಿದೆ. ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತಾತ್ಮಕ ಆದೇಶದಲ್ಲಿ, ದೇಶದ ಭದ್ರತೆ, ವಿದೇಶಿ ನೀತಿ ಮತ್ತು ಆರ್ಥಿಕತೆಗೆ ಚೀನಾ ದೇಶದ ಸಾಫ್ಟ್ ವೇರ್ ಅಪ್ಲಿಕೇಶನ್ ಗಳು ಧಕ್ಕೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗುತ್ತಿದೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel