ಬೆಂಗಳೂರು : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದು, ಸದ್ಯ ಅವರು ನನ್ನ ಹೆಸರನ್ನು ಬಾಯ್ಬಿಟ್ಟರೆ ನಿಮಗೆ ತೊಂದರೆಯಾಗುತ್ತದೆ ಎಂದು ಚನ್ನನಾಯ್ಕ್ (Channa Naik) ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ನಾಯ್ಕ್ ಪತ್ನಿ, ನನ್ನ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಹೇಳಬೇಡಿ. ನಮ್ಮ ಹೆಸರನ್ನೂ ಹೇಳಬೇಡಿ, ನಮ್ಮ ನಂಬರ್ ಕೂಡ ಕೊಡಬೇಡಿ. ಒಂದೆರಡು ದಿನಗಳಲ್ಲಿ ನಾವು ಸೆಟ್ಲ್ ಮೆಂಟ್ ಮಾಡಿಕೊಳ್ಳುತ್ತಾ ಇದ್ದೀವಿ. ನನ್ನ ಹೆಸರನ್ನು ಹೇಳಿದರೆ, ನಿಮಗೆ ತೊಂದರೆಯಾಗುತ್ತದೆ ಎಂದು ಚೈತ್ರಾ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಯಜಮಾನರು ಆಸೆಗೆ ಬಿದ್ದು ಹಾಳಾದರು ಎಂದು ಪತ್ನಿ ಕಣ್ಣೀರು ಹಾಕಿದ್ದಾರೆ. ವಂಚನೆ ಪ್ರಕರಣದಲ್ಲಿ ವಿಶ್ವನಾಥ್ ಜೀ ಪಾತ್ರ ನಿರ್ವಹಿಸಿದ್ದ ಚನ್ನ ನಾಯ್ಕ್‍ನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.








