Chaitra Navratri | ಶರನ್ನ ನವರಾತ್ರಿಯ ಐದನೇ ದಿನ ದುರ್ಗಾ ಮಾತೆಯ ಸ್ಕಂದಮಾತಾ ರೂಪದ ವಿಶೇಷ
ಶರನ್ನ ನವರಾತ್ರಿಯ ಐದನೇ ದಿನದಂದು ದುರ್ಗಾ ಮಾತೆಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಮೂರ್ಖನೂ ಅವನ ಅನುಗ್ರಹದಿಂದ ಜ್ಞಾನಿಯಾಗುತ್ತಾನೆ.
ಸ್ಕಂದಮಾತೆ ಪರ್ವತಗಳ ಮೇಲೆ ವಾಸಿಸುವ ಮೂಲಕ ಲೌಕಿಕ ಜೀವಿಗಳಲ್ಲಿ ಹೊಸ ಪ್ರಜ್ಞೆಯನ್ನು ಮೂಡಿಸಿದ ದೇವತೆ. ಸ್ಕಂದ ಕುಮಾರ ಕಾರ್ತಿಕೇಯನ ತಾಯಿಯಾದ ಕಾರಣ ಆಕೆಯನ್ನು ಸ್ಕಂದಮಾತೆ ಎಂದೂ ಕರೆಯುತ್ತಾರೆ. ಅವಳನ್ನು ಪೂಜಿಸುವುದರಿಂದ ಭಕ್ತನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ಐದನೇಯ ದಿನ – – ನವರಾತ್ರಿಯ ಈ ದಿನ ಅತ್ಯಂತ ಪುಣ್ಯಕಾಲವಾಗಿದೆ. ಈ ದಿನವನ್ನು ಲಲಿತಾಪಂಚಮೀ ಎಂದು ಕರೆಯುವರು. ಈ ಸಲ 30/9/22 ರಂದು ಲಲಿತಾ ಪಂಚಮೀ ಇದೆ.
ಇಂದು “ಧೂಮ್ರಹಾ” ಅಥವಾ “ಸ್ಕಂದಮಾತಾ” ಎಂಬ ಹೆಸರಿನಿಂದ ಪೂಜಿಸುವರು. ಧೂಮ್ರಹಾ ಎಂದರೆ ಧೂಮ್ರಾಕ್ಷ ಎಂಬ ರಾಕ್ಷಸನ್ನು ಹನನ ಮಾಡಿದವಳು ಎಂದು ಅರ್ಥ. ಸ್ಕಂದ ಮಾತಾ ಎಂದರೆ ಸುಬ್ರಹ್ಮಣ್ಯನ ತಾಯಿ ಎಂದು. ಈ ಎರಡೂ ರೂಪವೂ ಒಂದೇ ಆಗಿದೆ.
ಈ ದಿನದಂದು ತಾಯಿಗೆ “ದಧ್ಯನ್ನಾಸಕ್ತ ಹೃದಯಾ” ಎಂದು ಕರೆಯುವರು. ಯಾಕೆಂದರೆ ಲಲಿತಾ ಪಂಚಮಿಯಂದು ದಧ್ಯನ್ನ (ಮೊಸರನ್ನವನ್ನು) ವನ್ನು ಮಾಡಿ ಅದನ್ನು ತಾಯಿ ಲಲಿತೆಗೆ ನೈವೇದ್ಯ ಮಾಡಿ ಯಾರು ಪೂಜಿಸುತ್ತಾರೋ ಅವರಿಗೆ ಅವರ ಅಭೀಷ್ಟಸಿದ್ಧಿಸುವುದು ಮತ್ತು ಆ ದಧ್ಯವನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಿದರೆ ಒಳ್ಳೆಯ ಬುದ್ಧಿಶಕ್ತಿಯೊಂದಿಗೆ ಸದ್ವಿದ್ಯೆಯು ಪ್ರಾಪ್ತವಾಗುವುದು. ಈ ದಿನ ಸಾಯಂಕಾಲ ಸುಮಾರು ಮುಸ್ಸಂಜೆ ವೇಳೆಯಲ್ಲಿ ತುಪ್ಪ ದೀಪವನ್ನು ಬೆಳಗಿಸಿ ಲಲಿತಾ ಸಹಸ್ರನಾಮ ಪಠಿಸಿ ಸಮಸ್ತ ಅಮಂಗಲ ದೂರವಾಗುವುದು. ಹಾಗೆಯೇ –

ಚತುರ್ಭುಜಾಂ ಸುವರ್ಣಾಭಾಂ ಶಂಖಚಕ್ರಗದಾಂಬುಜಾಂ |
ಪಂಚಮ್ಯಾಂ ಪೂಜಯೇತ್ ದೇವೀಂ ಸದಾ ಮಕರವಾಹಿನೀಂ ||
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಎಂಬ ಶ್ಲೋಕವನ್ನು ಹೇಳುತ್ತಾ ಧ್ಯಾನಿಸಿ ಪುಷ್ಪಾರ್ಚನೆ ಮಾಡಿರಿ. ಮತ್ತು ದಧ್ಯನ್ನವನ್ನು ನೈವೇದ್ಯ ಮಾಡಿ ಪೂಜಿಸಿ. ಸತ್ಫಲವು ಪ್ರಾಪ್ತವಾಗುವುದು.








