Chak de India : ಸಲ್ಮಾನ್ ತಿರಸ್ಕರಿಸಿದ್ದ ಸಿನಿಮಾ ಶಾರುಖ್ ಗೆ ಕೊಟ್ಟಿತ್ತು ಬಿಗ್ ಹಿಟ್..
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಬಾಲಿವುಡ್ ಚಿತ್ರ ಚಕ್ ದೇ ಇಂಡಿಯಾ ತೆರೆಕಂಡು 15 ವರ್ಷಗಳೇ ಕಳೆದಿವೆ. ಮಹಿಳೆಯರ ಕ್ರೀಡಾ ಪ್ರಧಾನ ಕುರಿತ ಸಿನಿಮಾ ಇದಾಗಿದ್ದು, ಶಾರುಕ್ ಖಾನ್ ಹಾಕಿ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಶಿಮಿತ್ ಅಮೀನ್ ನಿರ್ದೇಶನದ ಚಕ್ ದೇ ಸಿನಿಮಾ ಬಂದು ಇದೀಗ 15 ವರ್ಷ ಕಳೆದಿದೆ.. 20 ಕೊಟಿ ರುಪಾಯಿ ಬಜೆಟ್ ನಲ್ಲಿ ತಯಾರಾದ ಸಿನಿಮಾ ವಿಶ್ವದಾದ್ಯಂತ 108 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಈ ಸಿನಿಮಾ ಶಾರುಕ್ ಖಾನ್ ಅವರ ಅತ್ಯುತ್ತಮ ಸಿನಿಮಾಗಳ ಲೀಸ್ಟನಲ್ಲಿ ಒಂದು. ಆದ್ರೆ ಶಾರುಖ್ ಖಾನ್ ಅವರು ಈ ಸಿನಿಮಾ ಮಾಡೋದಕ್ಕೆ ಮೊದ ಮೊದಲು ಹಿಂದೇಟು ಹಾಕಿದ್ದರಂತೆ… ಅಲ್ಲದೇ ಈ ಸಿನಿಮಾವನ್ನ ಮೊದಲಿಗೆ ಸಲ್ಮಾನ್ ಖಾನ್ ಅವರು ತಿರಸ್ಕರಿಸಿದ್ದರಂತೆ..
ಹೌದು ಈ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಶಾರುಖ್ ಖಾನ್ ನಾನು ಸಿನಿಮಾದ ಮೊದಲ ಪ್ರದರ್ಶನ ನೋಡಿದಾಗ ಇದು ನಮ್ಮ ಜೀವನದಲ್ಲಿ ನಾವು ಮಾಡಿದ ಕೆಟ್ಟ ಚಿತ್ರ ಎಂದು ಭಾವಿಸಿದ್ದೆವು. ಹುಡುಗಿಯರಿಗೆ ಇದು ತಿಳಿದಿರಲಿಲ್ಲ ಏಕೆಂದರೆ ಅವರಿಗೆ ಮೊದಲ ಬಾರಿಗೆ ತೆರೆಯ ಮೇಲೆ ನೋಡುವುದು ದೊಡ್ಡ ವಿಷಯವಾಗಿತ್ತು. ಹಾಗಾಗಿ ನಾವು ನಾಲ್ವರು ಅಲ್ಲಿ ಕುಳಿತು ಬೇಸರದಲ್ಲಿರುವಾಗ ಅವರು ಕಿರಿಕಿರಿಯಿಂದ ಕಿರುಚುತ್ತಾ ನೃತ್ಯ ಮಾಡುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ..
ಅಂದ್ಹಾಗೆ ಈ ಸಿನಿಮಾದ ಆಫರ್ ಮೊದಲಿಗೆ ಸಲ್ಮಾನ್ ಖಾನ್ ಗೆ ಸಿಕ್ಕಿತ್ತಂತೆ.. ಆದ್ರೆ ಈ ಸಿನಿಮಾವನ್ನ ಅವರು ತಿರಸ್ಕರಿಸಿದ್ದರು.. ಅಲ್ದೇ ಈ ಬಗ್ಗೆ ಸಲ್ಮಾನ್ ಖಾನ್ ಅವರು ಸಂದರ್ಶನವೊಂದ್ರಲ್ಲಿ ಮಾತನಾಡ್ತಾ ಚಕ್ ದೇ ಇಂಡಿಯಾ ಸಿನಿಮಾವನ್ನ ನನಗೆ ನೀಡಲಾಗಿತ್ತು… ಆದ್ರೆ ಶಾರುಖ್ ಖಾನ್ ಸಹ ಕೆಲವು ಉತ್ತಮ ಚಿತ್ರಗಳ ಭಾಗವಾಗಬೇಕು ಎಂಬ ಕಾರಣದಿಂದ ನಾನು ಅದನ್ನು ತೊರೆದಿದ್ದೇನೆ ಎಂದಿದ್ದರು.. ಅವರು ಅದನ್ನ ತಮಾಷೆಯ ರೀತಿಯಲ್ಲಿ ಹೇಳಿದ್ದರಾದ್ರೂ ಕೆಲವರು ಅವರ ಹೇಳಿಕೆಯನ್ನ ಆಗ ವಿರೋಧಿಸಿದ್ದೂ ಉಂಟು..








