ಮುನಿರತ್ನ ನಂತಹ ಮುತ್ತು ರತ್ನಗಳು RSS ಶಾಖೆಯಲ್ಲಿ ಟ್ರೈನಿಂಗ್ ಪಡೆದಿವೆ ಎಂದು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದು, ಇದಕ್ಕೆ ಕಲಬುರಗಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಭಾರತದಲ್ಲಿ ತುರ್ತು ಪರಿಸ್ಥಿಬಂದಾಗ ಸರ್ದಾರ ವಲ್ಲಾಭಾಯಿ ಪಟೆಲ್ ಅವರು ಇಲ್ಲಿನ ತರುಣರನ್ನು ಆರೆಸ್ಸೆಸ್ ಶಾಖೆಗೆ ಕಳುಹಿಸಿಕೊಡಿ ಎಂದು ಕೇಳಿದ್ದರು. ಪ್ರಕೃತಿ ವಿಕೋಪ ಆದಾಗ ಸಹಕಾರಕ್ಕೆ ಆರೆಸ್ಸೆಸ್ ನವರು ಬಂದಿದ್ದರೆ ಹೊರತು, ಕಾಂಗ್ರೆಸ್ ನವರು ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
RSS ಅಂದರೆ ಏನು ಅನ್ನೋದು ಗೊತ್ತಾಗಬೇಕು ಅಂದ್ರೆ, ಕಾಂಗ್ರೆಸ್ ನವರು ಸೇರಲಿ. ಕೆರಳದಲ್ಲಿ ಕಮ್ಯುನಿಸ್ಟ್ ಗಳು ತುಂಬಿಕೊಂಡಿದ್ದಾರೆ ಎಂದು ಹೇಳಿದಾಗಲು ನಮ್ಮವರು ಬಂದು ಸಹಾಯ ಮಾಡಿದ್ದಾರೆ. ಮುಸಲ್ಮಾನರನ್ನು ಉಳಿಸಲು ಧಾವಿಸಿದ್ದು ಇದೇ ಆರೆಸ್ಸೆಸ್. ಹೀಗಾಗಿ ಆರೆಸ್ಸೆಸ್ ಬಗ್ಗೆ ತಿಳಿಯಬೇಕಾದರೆ ಸೇರಿಕೊಳ್ಳಲಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಘಟನೆಗಳು ನಡೆಯುತ್ತವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸ್ವಪ್ಟವಾಗಿ ಹೇಳಿದ್ದು, ಮುಸಲ್ಮಾನರ ಸರ್ಕಾರ ಎಂದು ಅಂತಾ ವ್ಯಂಗ್ಯವಾಡಿದ್ದಾರೆ.