ಬ್ರಾಹ್ಮಣರ ಕುರಿತು ನೀಡಿದ ಹೇಳಿಕೆಗಳ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ನೀವು ಬ್ರಾಹ್ಮಣರ ಬಗ್ಗೆ ಇಷ್ಟು ಮಾತಾಡ್ತೀರಾ, ಆದರೆ ನಿಮ್ಮ ಮನೆಯಲ್ಲೇ ಯಾರನ್ನು ಹೊಂದಿಕೊಂಡಿದ್ದೀರಿ? ನೀವು ಯಾರನ್ನು ಮದುವೆಯಾಗಿದ್ದೀರಿ? ಎಂದು ಪ್ರಶ್ನಿಸಿದ ಅವರು, ಬ್ರಾಹ್ಮಣರು ದಲಿತ ವಿರೋಧಿಗಳು ಎಂದು ಹೇಳುವುದಾದರೆ, ನಿಮ್ಮ ಕುಟುಂಬದಲ್ಲೇ ಬ್ರಾಹ್ಮಣರೊಂದಿಗೆ ಸಂಬಂಧ ಹೊಂದಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಹಾಗಾದರೆ ನೀವು ದಲಿತರಲ್ಲವಾ? ಎಂದು ತೀವ್ರವಾಗಿ ಪ್ರಶ್ನಿಸಿ, ಈ ಹೇಳಿಕೆಗಳು ಹೇಟ್ ಸ್ಪೀಚ್ಗೆ ಸೇರುತ್ತವೆ ಎಂದು ಆರೋಪಿಸಿದ್ದಾರೆ. ಸಂಬಂಧಿಸಿದ ಪ್ರಕರಣದಲ್ಲಿ ಅಪ್ಪ-ಮಗ ಇಬ್ಬರ ಮೇಲೂ ಕ್ರಮ ಕೈಗೊಂಡು, ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.








