ಬರ್ತ್ ಡೇ ಹಿನ್ನೆಲೆ ಅಭಿಮಾನಿಗಳಿಗೆ ಏನಂತ ಮನವಿ ಮಾಡಿದ್ರು ಡಿ ಬಾಸ್..!
ಬೆಂಗಳೂರು: ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಹಿನ್ನೆಲೆ, ಪ್ರತಿ ವರ್ಷದಂತೆಯೇ ಈ ಬಾರಿಯೂ ಬಹಳ ಅದ್ಧೂರಿಯಾಗಿ ದಚ್ಚು ಬರ್ತ್ ಡೇ ಸೆಲೆಬ್ರೇಟ್ ಮಾಡಲು ಡಿ ಬಾಸ್ ಭಕ್ತರು ಪ್ಲಾನ್ ಮಾಡಿಕೊಂಡಿದ್ದಾರೆ. ಈ ವರ್ಷ ಕೊರೊನಾ ಹಾವಳಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿರುವ ಹಿನ್ನೆಲೆ ದರ್ಶನ್ ಅವರು ಅಭಿಮಾನಿಗಳಿಗೆ ಮನೆ ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಲೈವ್ ಗೆ ಬಂದು ಮಾತನಾಡಿದ ಅವರು , ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ. ಫೆಬ್ರವರಿ 16ರಂದು ನನ್ನ ಹುಟ್ಟುಹಬ್ಬ..
ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದು ನಿಜ : ಸತ್ಯ ಒಪ್ಪಿಕೊಂಡ ಪಾಕ್..!
ಕೊರೊನಾ ಸಂಕಷ್ಟದ ನಡುವೆ ಬರ್ತ್ ಡೇ ಆಚರಿಸಿಕೊಳ್ಳೊಕೆ ಮನಸ್ಸಿಲ್ಲ. ದಯವಿಟ್ಟು ನೀವು ದೂರಾದೂರಿನಿಂದ ದುಡ್ಡು ಖರ್ಚು ಮಾಡಿಕೊಂಡು ಮನೆ ಹತ್ತಿರ ಬರಬೇಡಿ ಎಂದು ದರ್ಶನ್ ಆಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಕೊರೊನಾ ತಂದ ಸಂಕಷ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ ದರ್ಶನ್, ರಾಬರ್ಟ್ ಮಾರ್ಚ್ 11ಕ್ಕೆ ರಿಲೀಸ್ ಗೆ ರೆಡಿ ಮಾಡಿಕೊಳ್ತಾ ಇದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಚಿತ್ರರಂಗವನ್ನು ಉಳಿಸಿ ಬೆಳಸಿ ಅಂತ ಮನವಿ ಮಾಡಿಕೊಂಡ್ರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








