ಗಣೇಶ ಹಬ್ಬಕ್ಕೆ ಡಿ ಬಾಸ್ ಗಿಫ್ಟ್ – ಹೊಸ ಪೋಸ್ಟರ್ ಬಿಡುಗಡೆ..
ಡಿ ಬಾಸ್ ರ ಬಹುನಿರೀಕ್ಷೆಯ ಕ್ರಾಂತಿ ಸಿನಿಮಾದ ಅಪ್ ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದು , ಗಣೇಶ ಹಬ್ಬಕ್ಕೆ ಅವರಿಗೆ ಸಿನಿಮಾ ತಂಡದಿಂದ ಪೋಸ್ಟರ್ ಗಿಫ್ಟ್ ಸಿಕ್ಕಿದೆ..
ಪೋಸ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಯೂಟ್ ನಲ್ಲಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ..
ವಿ ಹರಿಕೃಷ್ಣ ಅವರು ಆಕ್ಷನ್ ಕಟ್ ಹೇಳುತ್ತಿರುವ ದರ್ಶನ್ ಅವರ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.. ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ..
ಅಭಿಮಾನಿಗಳು ಈಗಿನಿಂದಲೇ ರಾಜ್ಯಾದ್ಯಂತ ಕ್ರಾಂತಿಯ ಜಾತ್ರೆ ಶುರು ಮಾಡಿದ್ದಾರೆ.. ಕನ್ನಡ , ತಮಿಳು , ತೆಲುಗು , ಮಲಯಾಳಂ, ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಸಿನಿಮಾತಂಡ ಪ್ರಚಾರವನ್ನೂ ಕೂಡ ಶುರುಮಾಡಿದೆ..
ಈಗ ರಿಲೀಸ್ ಆಗಿರುವ ಹೊಸ ಪೋಸ್ಟರ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..