ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಇಂದು ಸಂಜೆ ಬಿಡುಗಡೆ..
ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಇಂದು ಸಂಜೆ 7 ಗಂಟೆಗೆ ಹೊಸಪೇಟೆಯಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಕ್ರಾಂತಿ ಚಿತ್ರದ ಧರಣಿ ಹಾಡು ಬಿಡುಗಡೆಯಾಗಿದ್ದ ಯೂಟೂಬ್ ನಲ್ಲಿ ಹೀಟ್ ಆಗಿದೆ.
ಯೋಗರಾಜ್ ಭಟ್ ಅವರು ಬರೆದಿರುವ “ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು, ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳೋ…. ಬೊಂಬೆ… ಬೊಂಬೆ”… ಎನ್ನವ ಸಾಹಿತ್ಯಕ್ಕೆ ಸೋನು ನೀಗಮ್ ಅವರು ಧನಿಯಾಗಿದ್ದು, ವಿ ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ರಚಿತ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಕ್ರಾಂತಿ ಚಿತ್ರ ಮುಂದಿನ ವರ್ಷ ಜನವರಿ 26 ರಂದು ಗಣರಾಜ್ಯೋತ್ಸದಂದು ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದು, ಚಿತ್ರ ತಂಡ ಒಂದೊಂದಾಗಿ ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ಚಿತ್ರದ ಹೈಪ್ ಹೆಚ್ಚಿಸುತ್ತಿದೆ.
challenging star darshan : The second song Bombe Bombe from the film Kranti will be released this evening..