Chamarajanagar : ಬಸ್ ಕಳುಹಿಸಿಕೊಂಡಿ ಎಂದು ಸಿ ಎಂಗೆ ಮಕ್ಕಳ ಮನವಿ…
ಸಿಎಂ ಅಂಕಲ್ ನಮ್ಮ ಗ್ರಾಮಕ್ಕೆ ಬಸ್ ಕಳುಹಿಸಿಕೊಡಿ ಇಲ್ಲ ಅಂದ್ರೆ ನಾವು ಸ್ಕೂಲ್‌ಗೆ ಹೋಗಲ್ಲ ಎಂದು ಪುಟ್ಟ ಮಕ್ಕಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅರೆಕಡುವಿನ ದೊಡ್ಡಿ ಶಾಲಾ ಮಕ್ಕಳು ಪ್ರತಿ ನಿತ್ಯ ಶಾಲೆಗೆ 6 ಕಿ.ಮಿ ನಡೆದು ಹೋಗುವ ಪರಿಸ್ಥಿತಿ ಉಂಟಾಗಿದೆ. ಇದು ಬಸ್ ವಂಚಿತ ಗ್ರಾಮವಾಗಿದ್ದು, ಹಲವು ಕೆಲಸ ಕಾರ್ಯಗಳಿಗೆ ನಡೆದುಕೊಂಡು ಹೋಗುವ ಇಲ್ಲವೇ ಖಾಸಗಿ ವಾಹನಗಳನ್ನ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ನಾಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಲವು ಯೋಜನೆಗಳನ್ನ ಉದ್ಘಾಟಿಸಿಲು ತೆರಳುತ್ತಿದ್ದು ಇದೇ ವೇಳೆ ಬಸ್ ಸಂಚಾರವನ್ನಆರಂಭಿಸಲು ಶಾಲಾ ಮಕ್ಕಳು ಸಿ ಎಂ ಮನವಿ ಸಲ್ಲಿಸಿದ್ದಾರೆ.
Chamarajanagar: Children request CM to send bus…








