Chamarajanagar | ನಡುರಸ್ತೆಯಲ್ಲಿ ಹಸುವಿನ ಮೇಲೆ ಚಿರತೆ ದಾಳಿ
ಚಾಮರಾಜನಗರ : ರಸ್ತೆಯಲ್ಲಿ ಆಹಾರ ಅರಸಿ ಬಂದ ಹಸುವೊಂದನ್ನು ಚಿರತೆಯೊಂದು ಕೊಂದು ಎಳೆಯೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ಗುಂಡ್ಲುಪೇಟೆ ಮಾರ್ಗದಲ್ಲಿನ ತಮಿಳುನಾಡು ಭಾಗದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಚಿರತೆಯು ಹಸುವೊಂದನ್ನು ಭೇಟೆಯಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಸಿದು ಕುಳಿತಿದ್ದ ಚಿರತೆಯು ಮೇವು ಹರಸಿ ಬಂದ ಹಸುವಿನ ಕತ್ತಿನ ಭಾಗವನ್ನು ಹಿಡಿದಿದೆ.
ಇದನ್ನ ಗಮನಿಸಿದ ವಾಹನ ಸವಾರರು ಕೂಗಿಕೊಂಡು ಜೋರಾಗಿ ಹಾರನ್ ಶಬ್ದ ಮಾಡಿದ್ದಾರೆ.
ಇನ್ನು ರಸ್ತೆ ಪಕ್ಕದಲ್ಲಿಯೇ ಚಿರತೆ ಬೇಟೆಯಾಡಿರುವುದರಿಂದ ವಾಹನ ಸವಾರಲ್ಲಿ ಆತಂಕ ಮನೆ ಮಾಡಿದೆ.








