Chamarajanagar : ಖಾಸಗಿ ಬಸ್ ಅಪಘಾತ ಸಂಭವಿಸಿದ್ದು 30 ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಚಾಮರಾಜನಗರ ಟಿ.ನರಸೀಪುರ ಮಾರ್ಗದ ಮೂಗೂರು ಕ್ರಾಸ್ ಬಳಿ ನಡೆದಿದೆ..
ಮಹದೇಶ್ವರಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಉದಯರಂಗ ಖಾಸಗಿ ಬಸ್ಸು ಭಾನುವಾರ ಬೆಳಿಗ್ಗೆ ಸ್ವಯಂ ಅಪಘಾತವಾಗಿದ್ದು ಬಸ್ಸಿನಲ್ಲಿ ಸುಮಾರು 50 ರಿಂದ 60 ಜನ ಪ್ರಯಾಣಿಕರಿದ್ದು 30 ರಿಂದ 35 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸಾರ್ವಜನಿಕರು 108ಗೆ ಕರೆ ಮಾಡುವ ಮೂಲಕ ಚಿಕಿತ್ಸೆಗಾಗಿ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ..
ಉಳಿದ ಗಾಯಾಳುಗಳನ್ನು ಕೂಡ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಂಡಿದ್ದಾರೆ.