ಬ್ಯಾಂಕ್ ಗಳ ದರೋಡೆಗೆ ಯತ್ನಿಸಿದ್ದ ನಾಲ್ವರ ಬಂಧನ Chamarajanagara saaksha tv
ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ಪೊಲೀಸರು ಬ್ಯಾಂಕ್ ಗಳ ದರೋಡೆಗೆ ಯತ್ನಿಸಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹನೂರಿನ 26 ವರ್ಷದ ಅಭಿಷೇಕ್, 27 ವರ್ಷದ ಶ್ರೀನಿವಾಸ್, ರಾಚಪ್ಪಾಜಿನಗರದ ಮುತ್ತುಸ್ವಾಮಿ , ಮಲ್ಲೇಶ್(26) ಬಂಧಿತ ಆರೋಪಿಗಳಲಾಗಿದ್ದಾರೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಪೊಲೀಸರು ಬಂಧಿತರಿಂದ ಬ್ಯಾಂಕ್ ಗಳ ಕಂಪ್ಯೂಟರ್ ಮಾನಿಟರ್, ಸಿಸಿಟಿವಿ ಡಿವಿಆರ್, ಆಂಪ್ಲಿಫೈರ್, ಎರಡು ಮೋಟಾರ್ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಪೊನ್ನಾಚಿ ಗ್ರಾಮದ ಎಸ್.ಬಿ.ಐ ಬ್ಯಾಂಕ್, ಕೊಳ್ಳೇಗಾಲದ ಎಂಡಿಸಿಸಿ ಬ್ಯಾಂಕ್ ದರೋಡೆಗೆ ಈ ಖದೀಮ ಯತ್ನಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಪೊಲೀಸರು ಇವರನ್ನು ಬಂಧಿಸಿದ್ದಾರೆ.