ಚಾಮರಾಜನಗರದಲ್ಲಿ ಕೊರೊನಾಗೆ ಕೇರ್ ಮಾಡದ ಜನ
ಚಾಮರಾಜನಗರ : ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಮುಗಿಯುತ್ತಿದ್ದಂತೆ ರಸ್ತೆಗಿಳಿದ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.
ಚಾಮರಾಜನಗರ ಟಾಸ್ಕ್ ಪೋರ್ಸ್ ಸೂಚನೆಯಂತೆ ಜಿಲ್ಲಾಡಳಿತ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಹೇರಿತ್ತು. ವಾರದ ಕೊನೆಯ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಗೆ ತೆರೆ ಬೀಳುತ್ತಿದ್ದಂತೆ ವಾರದ ಮೊದಲ ದಿನವಾದ ಸೋಮವಾರ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿನ ಅಂಗಡಿ ಬೀದಿಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು.
ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಜನರು ಅಗತ್ಯ ವಸ್ತುಗಳ ಖರೀದಿಗೆ ದ್ವಿಚಕ್ರವಾಹನದೊಂದಿಗೆ ಆಗಮಿಸಿದ್ದರು. ಅಂಗಡಿ ಬೀದಿಗಳಲ್ಲಿ ವಾಹನ ಸಂಚಾರವೂ ಅಧಿಕವಾಗಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.
ಬೆಳಗ್ಗೆಯಿಂದಲೇ ಸಾರ್ವಜನಿಕರು ದಿನಸಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಂದಾದರು. ಬೆಳಗ್ಗೆ 8.30 ರಲ್ಲಿ ಮತ್ತಷ್ಟು ಸಾರ್ವಜನಿಕರು ರಸ್ತೆಗಿಳಿದು ಜಾತ್ರೆಯಂತೆ ಕಾಣುತ್ತಿತ್ತು. ಅಂಗಡಿ ಬೀದಿಗಳು.
ದಿನಸಿ ಅಂಗಡಿ, ತರಕಾರಿ ಅಂಗಡಿ, ಸೊಪ್ಪು ಖರೀದಿಯಲ್ಲಿ ಸಾರ್ವಜನಿಕರು ಮುಂದಾಗಿದ್ದರು. ಸುರಕ್ಷಾ ತಂಡದವರು ಆಗಮಿಸಿ ಸಂಚಾರ ನಿಯಂತ್ರಣಕ್ಕೆ ಮುಂದಾದರೂ ಕೋರೊನಾ ಸೋಂಕಿಗೂ ಡೋಂಟ್ ಕೇರ್ ಅನ್ನದ ಜನತೆ ನೂಕು ನುಗ್ಗಲಿನಲ್ಲೇ ವ್ಯಾಪಾರ ವಹಿವಾಡಿನಲ್ಲಿ ತೊಡಗಿದ್ದರು.










