ಚಾಮರಾಜನಗರ : ಕೋರನಾ ವೈರಸ್ ನಿಯಂತ್ರಣ ಮಾಡುವ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಾಮೂಲ್ಯವಾಗಿದ್ದು, ಅವರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯು ಅಭಿನಂಧನೆ ಹಾಗೂ ಪುಷ್ಪ ವೃಷ್ಟಿ ಅರ್ಪಿಸಿತು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಶಾ ಕಾರ್ಯಕರ್ತೆ ಯರು ನುಸ್ವಾರ್ಥವಾಗಿ ಕೊರಾನಾ ವೈರಸ್ ನಿಯಂತ್ರಣಕ್ಕೆ ಸಹಕಾರಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಗ್ರೀನ್ ಝೋನ್ ಗೆ ಬರಲು ಇವರ ಪಾತ್ರ ಮಹತ್ವದ್ದಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಹೇಳಿದರು.
ಅವರು ಗುಂಡ್ಲುಪೇಟೆ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಸಮಾಮಭದಲ್ಲಿ ಭಾಗವಹಿಸಿ ಆಶಾ ಕಾರ್ಯಕರ್ತೆ ಯರ ಸೇವೆ ಶ್ಲಾಘಿಸಿದರು. ಹಾಗೂ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಪುರಸಭಾಧ್ಯಕ್ಷ ಗಿರೀಶ್, ಮಾಜಿ ಸದಸ್ಯ ಗೋವಿಂದರಾಜು, ಆರ್.ಎಸ್ ಎಸ್ ನ ಮಹೇಶ್, ಪ್ರವೀಣ್ ಸೇರಿದಂತೆ ಹಲವಾರು ಮಂದಿ ಇದ್ದರು.