Chamarajanagara : ಗುಡ್ಡ ಕುಸಿತ – 6 ಕಾರ್ಮಿಕರು ಸಾವು
ಚಾಮರಾಜನಗರ : ಬಿಳಿ ಕಲ್ಲು ಗಣಿಗಾರಿಕೆ ಗುಡ್ಡ ಕುಸಿತವಾಗಿ ಆರು ಕಾರ್ಮಿಕರ ಸಾವನಪ್ಪಿರೋ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಡಹಳ್ಳಿ ಗುಮ್ಮನಕಲ್ಲಿನಲ್ಲಿ ನಡೆದಿದೆ..
ಗುಡ್ಡ ಕುಸಿತ ಪ್ರಕರಣದಲ್ಲಿ ಆರು ಮಂದಿ ಮೃತಪಟ್ಟಿದ್ದು , 6 ಮಂದಿ ಗಾಯಗೊಂಡಿದ್ದು ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ..
ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಮದು ತಿಳಿಸಿದ್ದಾರೆ.. ಮಾತು ಮುಂದುವರೆಸಿ , ಜಿಲ್ಲೆಯಲ್ಲಿ ಹೆಚ್ಚು ಗಣಿಗಾರಿಕೆಯಿದ್ದು ಈ ರೀತಿ ಘಟನೆ ಇದೆ ಮೊದಲ ಬಾರಿಗೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ..