ಚಂದು ಪಾಲಿಗೆ ರಿಯಲ್ ಲೈಫ್ ನಲ್ಲಿ ‘ಲಕ್ಷ್ಮಿ’ಯಾದ ಕವಿತಾ..!
ಲಕ್ಷ್ಮಿಬಾರಮ್ಮ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿ ಜನಮನ ಸೆಳೆದ ಜೋಡಿ ಚಂದು ಹಾಗೂ ಚಿನ್ನು ಖ್ಯಾತಿಯ ಕವಿತಾ ಗೌಡ ಇದೀಗ ನಿಜಜೀವನದಲ್ಲೂ ಎಂಗೇಜ್ ಆಗಲಿಕ್ಕೆ ಹೊರಟಿದ್ದಾರೆ. ಹೌದು ಈ ಇಬ್ಬರೂ ಕೂಡ ಏ. 1 ರಂದು ಅಂದ್ರೆ ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ಧಾರೆ. ಈ ಬಗ್ಗೆ ಖುದ್ದು ನಟ ಚಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಇಬ್ಬರ ಕ್ಯೂಟ್ ಫೋಟೋ ಶೇರ್ ಮಾಡಿಕೊಂಡಿದ್ದು, ‘ಏಪ್ರಿಲ್ 1 ರಂದು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ಚಂದನ್ ಪೋಸ್ಟ್ ಗೆ ಸೆಲೆಬ್ರಿಟಿಗಳು ಸಹ ಕಮೆಂಟ್ ಮಾಡ್ತಿದ್ದು, ವಿಶಸ್ ತಿಳಿಸಿದ್ದು, ನೆಟ್ಟಿಗರೂ ಸಹ ಈ ಜೋಡಿಗೆ ಶುಭಾಷಯ ತಿಳಿಸುತ್ತಿದ್ದಾರೆ. ಅಂದ್ಹಾಗೆ ತುಂಬಾ ದಿನಗಳಿಂದಲೂ ಈ ಜೋಡಿ ಪರಸ್ಪರ ಪ್ರೀತಿಸುತ್ತಿದೆ ಎಂದು ವದಂತಿಗಳು ಹರಿದಾಡುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಫೋಟೋಗಳು ಹರಿದಾಡಿದ್ದವು. ಈ ಜೋಡಿ ಹೆಚ್ಚಾಗಿ ಸಮಾರಂಭಗಳಿಗೆ ಜೊತೆಯಾಗಿ ಹೋಗುತ್ತಿತ್ತು. ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಿದ್ದ ಫೋಟೋಗಳು ವೈರಲ್ ಆಗಿದ್ದವು. ಆದ್ರೆ ಇದಕ್ಕೆ ಉತ್ತರಿಸಿದ್ದ ಕವಿತಾ ಹಾಗೂ ಚಂದು ನಾವಿಬ್ಬರು ತುಂಬಾ ಒಳ್ಳೆಯ ಸ್ನೇಹಿತರಷ್ಟೇ ಎಂದಿದ್ದರು.
ಅಭಿಮಾನಿ ತಾಯಿಯ ಆಸ್ಪತ್ರೆ ಬಿಲ್ ಪಾವತಿಸಿದ ಕಿಚ್ಚ ಸುದೀಪ್..!
‘ರಾಮಾಯಣ’ ದಿಂದ ‘ಕ್ರಿಶ್’ ಔಟ್..! ಹೃತಿಕ್ ಜಾಗಕ್ಕೆ ‘ಟಾಲಿವುಡ್ ಪ್ರಿನ್ಸ್’..!
‘ವಕೀಲ್ ಸಾಬ್’ ಮುಂದೆ ‘ಬಾಹುಬಲಿ’ಯ ರೆಕಾರ್ಡ್ ಪೀಸ್ ಪೀಸ್..!
ದಿ ಬಿಗ್ ಬುಲ್ ನಲ್ಲಿ ಹರ್ಷ ಮೆಹ್ತಾವನ್ನು ವೈಟ್ವಾಶ್ ಮಾಡಲು ಯಾವುದೇ ಪ್ರಯತ್ನವಿಲ್ಲ – ಅಭಿಷೇಕ್ ಬಚ್ಚನ್