ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ
Chandrayaan-3 is a lunar orbiter
ಇಸ್ರೋ ಜುಲೈ 14ರಂದು ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಯೋಜನೆಯ ಮೊದಲ ಹೆಜ್ಜೆ ಇಟ್ಟಿತು. ಈ ನೌಕೆ ಈಗಾಗಲೇ ತನ್ನ ಪ್ರಯಾಣದ ಮೂರನೇ ಎರಡರಷ್ಟು ಹಾದಿ ಕ್ರಮಿಸಿದೆ. ಆಗಸ್ಟ್ ಒಂದರಂದು ಭೂಮಿಯ ಕಕ್ಷೆಯಿಂದ ಹೊರಕ್ಕೆ ಜಿಗದು ಚಂದ್ರನತ್ತ ಪ್ರಯಾಣ ಆರಂಭಿಸಿತ್ತು.
ಇದೀಗ ಭೂಮಿಯ ಕಕ್ಷೆಯಿಂದ ಜಿಗಿದ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಲೂನಾರ್ ಆರ್ಬಿಟ್ ಇಂಜೆಕ್ಷನ್ ಪ್ರಕ್ರಿಯೆಗೆ ಇಸ್ರೋ ಮುಹೂರ್ತ ನಿಗದಿಪಡಿಸಿತ್ತು. ಈ ಮುಹೂರ್ತವನ್ನು ಚಂದ್ರನ ಕಕ್ಷೆಗೆ ಅತ್ಯಂತ ಸನಿಹದಲ್ಲಿ ನೌಕೆ ಇರುವ ಕ್ಷಣ ನೋಡಿಕೊಂಡು ಇಸ್ರೋ ನಿರ್ಧರಿಸಲಾಗುತ್ತದೆ.
ಇದೀಗ ಈ ಕ್ಷಣ ಬಂದಿದ್ದು ಶನಿವಾರ ಸಂಜೆ 7 ಗಂಟೆಗೆ ನೌಕೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗುವ ಮೂಲಕ ಯೋಜನೆಯ ಎರಡನೇ ಹೆಜ್ಜೆ ಇಟ್ಟಿದೆ. ಇನ್ನೂ ಕೊನೆ ಹಂತ ಚಂದಿರನ ಮೇಲೆ ಲ್ಯಾಂಡರ್ ಇಳಿಸಲು ಆಗಸ್ಟ್ 23 ದಿನಾಂಕ ನಿಗದಿಪಡಿಸಲಾಗಿದೆ.