ಜನರೇ ಗಮನಿಸಿ : ಬ್ಯಾಂಕ್ ಗಳ ಕೆಲಸದ ಸಮಯದಲ್ಲಿ ಬದಲಾವಣೆ
ಬೆಂಗಳೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸಿಬೊಬ್ಬಿರಿಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ.
ಅದೇ ರೀತಿ 2000ಕ್ಕೂ ಹೆಚ್ಚು ಮಂದಿಯನ್ನ ಕೊರೊನಾ ಬಲಿತೆಗೆದುಕೊಂಡಿದೆ. ಈ ಮಧ್ಯೆ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಕೆಲಸದ ಸಮಯವನ್ನ ಬದಲಿಸುವಂತೆ ಭಾರತೀಯ ಬ್ಯಾಂಕುಗಳ ಸಂಘ ಬ್ಯಾಂಕ್ ಗಳಿಗೆ ಸೂಚಿಸಿದೆ.
ಈ ಕುರಿತು ಭಾರತೀಯ ಬ್ಯಾಂಕುಗಳ ಸಂಘ, ರಾಜ್ಯಮಟ್ಟದ ಬ್ಯಾಂಕಿಂಗ್ ಸಮಿತಿ ಕನ್ವೀನರ್ ಗಳಿಗೆ ಪತ್ರ ಬರೆದಿದೆ.
ಇದರಲ್ಲಿ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕೆಲಸದ ಸಮಯವನ್ನು ನಿಬರ್ಂಧಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.
ಏಪ್ರಿಲ್ 21ರಂದು ವಿಶೇಷ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಐಬಿಐ ಈ ನಿರ್ಧಾರ ತೆಗೆದುಕೊಂಡಿದೆ.
ಬ್ಯಾಂಕುಗಳು ಠೇವಣಿ ಸ್ವೀಕರಿಸುವಿಕೆ, ನಗದು ಹಿಂಪಡೆಯುವಿಕೆ, ಹಣ ರವಾನೆ ಮತ್ತು ಸರ್ಕಾರಿ ವ್ಯವಹಾರಗಳ ನಾಲ್ಕು ಕಡ್ಡಾಯ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ.