PDF ನಂತಹ ಸಾಫ್ಟ್ ವೇರ್ ಗಳನ್ನ ಅಭಿವೃದ್ಧಿಪಡಿಸಿದ್ದ ಅಡೋಬ್ ಸಹ ಸಂಸ್ಥಾಪಕ ಚಾರ್ಲ್ಸ್ ವಿಧಿವಶ
ಅಮೆರಿಕ : ಪಿಡಿಎಫ್, ಫೋಟೋಷಾಪ್ ನಂಥ ಹಲವಾರು ಸಾಫ್ಟ್ವೇರ್ ಗಳನ್ನು ಅಭಿವೃದ್ಧಿಪಡಿಸಿರುವ ವಿಶ್ವಪ್ರಸಿದ್ಧ ಅಡೋಬ್ ಕಂಪೆನಿಯ ಸಹಸಂಸ್ಥಾಪಕ ಚಾರ್ಲ್ಸ್ ಚುಕ್ ಗೆಶ್ಕೆ ವಿಧಿವಶರಾಗಿದ್ದಾರೆ. 81 ವರ್ಷ ವಯಸ್ಸಿನಲ್ಲಿ ಗೆಶ್ಕೆ ಇಹಲೋಕ ತ್ಯಜಿಸಿದ್ದಾರೆ.
ಪಿಡಿಎಫ್ ಪರಿವರ್ತಿಸುವ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದ ಚಾರ್ಲ್ಸ್ ಬರಹ ಹಾಗೂ ಚಿತ್ರಗಳನ್ನು ಪೇಪರ್ ಮೇಲೆ ಪ್ರಿಂಟ್ ಮಾಡುವುದು ಅತ್ಯಂತ ಸುಲಭವ ವಿಧಾನ ನೀಡಿ ಪಿಡಿಎಫ್ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣಕರ್ತರಾಗಿದ್ದರು.
ಚಾರ್ಲ್ಸ್ ಅಡೋಬ್ ಸಾಫ್ಟ್ವೇರ್ ಪಿಡಿಎಫ್, ಅಕ್ರೋಬಾಟ್, ಇಲ್ಯುಸ್ಪ್ರೇಟರ್, ಪ್ರೀಮಿಯರ್ ಪ್ರೋ ಮತ್ತು ಫೋಟೊಶಾಪ್ನಂತಹ ಜನಪ್ರಿಯ ಅಪ್ಲಿಕೇಶನ್ಗಳನ್ನು ಕೂಡ ಕಂಡುಹಿಡಿದಿದ್ದಾರೆ.