UPSC ಪರೀಕ್ಷೆ ಪಾಸ್ ಮಾಡುವಲ್ಲಿ ವಿಫಲವಾದ ChatGPT
ChatGPT ಎಂಬ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಟೂಲ್ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಯನ್ನ ಹುಟ್ಟು ಹಾಕಿದೆ. ಈ ಚಾಟ್ ಬಾಟ್ ನಾವು ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ ಜನಪ್ರಿಯತೆಯನ್ನೂ ಗಳಿಸಿಕೊಂಡಿದೆ. ಈ Chat GPT ವಿಶ್ವದ ಹಲವು ವಿಶ್ವವಿದ್ಯಾಲಯಗಳ ಕಠಿಣ ಪರೀಕ್ಷೆಯನ್ನೂ ಪಾಸ್ ಮಾಡಿ ಉತ್ತೀರ್ಣವಾಗಿತ್ತು, ಆದರೇ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ UPSC ಪರೀಕ್ಷೆಯನ್ನ ಕ್ಲಿಯರ್ ಮಾಡುವಲ್ಲಿ chat GPT ಎಡವಿದೆ.
ಚಾಟ್‌ಜಿಪಿಟಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಒದಗಿಸುವ ಕಾರ್ಯವನ್ನು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (ಎಐಎಂ) ವಹಿಸಿಕೊಂಡಿತ್ತು. UPSC 2022 ರ ಪ್ರಿಲಿಮ್ಸ್ ಪತ್ರಿಕೆಯ ಎಲ್ಲಾ 100 ಪ್ರಶ್ನೆಗಳನ್ನ ಕೇಳಲಾಗಿತ್ತು. ಇದರಲ್ಲಿ ChatGPT ಕೇವಲ 54 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಶಕ್ತವಾಗಿದೆ. UPSC ಪಾಸ್ ಮಾಡಲು ಸಾಮಾನ್ಯ ವರ್ಗದ ಕಟ್ ಆಫ್ ಪರ್ಸೆಂಟೆಜ್ ಶೇಕಡಾ 87.54ರಷ್ಟಿದೆ. ಹೀಗಾಗಿ ChatGPT UPSC ಪರೀಕ್ಷೆಯನ್ನ ಕ್ಲಿಯರ್ ಮಾಡಲು ವಿಫಲವಾಗಿದೆ.
ಚಾಟ್ ಜಿಪಿಟಿಗೆ ಪ್ರಚಲಿತ ವಿದ್ಯಮಾನ ಸೇರಿ ಭೂಗೋಳ, ಅರ್ಥಶಾಸ್ತ್ರ, ಇತಿಹಾಸ, ಪರಿಸರ ವಿಜ್ಞಾನ, ಸಾಮಾನ್ಯ ವಿಜ್ಞಾನದಂತಹ ಪ್ರಶ್ನೆಗಳನ್ನ ಕೇಳಲಾಗಿತ್ತು. ಕರೆಂಟ್ ಆಫೇರ್ಸ್ ಹೊರತುಪಡಿಸಿಯೂ ಭೌಗೋಳಿಕ,ಆರ್ಥಿಕತೆ, ಮತ್ತು ಇತಿಹಾಸದ ವಿಷಯಗಳಿಗೆ ತಪ್ಪು ಉತ್ತರ ನೀಡಿದೆ. ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಜ್ಞಾನ ಮಾತ್ರವಲ್ಲದೆ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳು, ಅಪ್ಲಿಕೇಶನ್ ಸಾಮರ್ಥ್ಯಗಳು ಮತ್ತು ಸಮಯ ನಿರ್ವಹಣೆಯ ಕೌಶಲ್ಯಗಳು ಅಗತ್ಯವಿರುತ್ತದೆ. ಈ ವಿಷಯದಲ್ಲಿ ಚಾಟ್ GPT ಫೇಲ್ ಆಗಿದೆ.
ChatGPT failed to clear UPSC exam