ಮೋಸ ಮಾಡುವವರು ಉದ್ಧಾರ ಆಗಲ್ಲ : ಸಮಂತಾಗೆ ಸಿದ್ದು ಟಾಂಗ್ siddharth saaksha tv
ಹೈದರಾಬಾದ್ : ನಾಗಚೈತನ್ಯಗೆ ಸಮಂತಾ ಡಿವೋರ್ಸ್ ಕೊಡುತ್ತಿದ್ದಂತೆ ಸ್ಯಾಮ್ ಮಾಜಿ ಪ್ರಿಯಕರ ನಟ ಸಿದ್ದಾರ್ಥ್ ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
ಸಿದ್ದಾರ್ಥ್ ತಮ್ಮ ಟ್ವೀಟ್ ನಲ್ಲಿ ಸಿದ್ದಾರ್ಥ್, ಮೋಸ ಮಾಡುವವರು ಎಂದಿಗೂ ಏಳೆಗೆಯಾಗುವುದಿಲ್ಲ, ಎನ್ನುವ ಪಾಠವನ್ನು ಬಾಲ್ಯದಲ್ಲಿ ನನ್ನ ಶಿಕ್ಷಕರಿಂದ ಕಲಿತೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಸಮಂತಾ ಮತ್ತು ಸಿದ್ದರ್ಥಾ ಮಾಜಿ ಪ್ರೇಮಿಗಳು. ತೆಲುಗಿನ ಜಬರ್ದಸ್ತ್ ಸಿನಿಮಾ ಸೆಟ್ಟಿನಲ್ಲಿ ಈ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು.
ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಯಾಗಿ ಪ್ರಮೋಟ್ ಆಗಿತ್ತು. ಇನ್ನೇನು ಇವರು ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ. ಇಬ್ಬರೂ ಬೇರೆ ಬೇರೆಯಾಗಿದ್ದರು.









