ಎಸ್’ಬಿಐ – ಮನೆಯಿಂದಲೇ ಬ್ಯಾಂಕ್ ಖಾತೆ ಪರಿಶೀಲಿಸಿ
ಹೊಸದಿಲ್ಲಿ, ಜೂನ್ 19: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ತೆರೆದಿದ್ದರೆ, ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸಲು ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಮನೆಯಿಂದಲೇ ನೀವು ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ತಮ್ಮ ಮೊಬೈಲ್ ನಿಂದಲೇ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸುವ ಸೌಲಭ್ಯವನ್ನು ಒದಗಿಸಿದೆ.
ಮನೆಯಿಂದಲೇ ಎಸ್.ಬಿಐ ಖಾತೆ ಪರಿಶೀಲಿಸುವುದು ಹೇಗೆ ಎಂಬುದನ್ನು ಈ ಕೆಳಗೆ ಕೊಡಲಾಗಿದೆ.
1. ಇದಕ್ಕಾಗಿ ಪ್ಲೇ ಸ್ಟೋರ್ ನಿಂದ ಮೊದಲು ಎಸ್.ಬಿಐ ನ ಯೋನೊ(YONO) ಆ್ಯಪ್ ಡೌನ್‌ಲೋಡ್ ಮಾಡಿ.
2. ನಂತರ ಎಸ್.ಬಿಐ ಗ್ರಾಹಕರು ಯೋನೊ ಆ್ಯಪ್ ಗೆ ಲಾಗಿನ್ ಆಗಬೇಕು.
3. ಬಳಿಕ ‘ಅಕೌಂಟ್’ ಮೇಲೆ ಕ್ಲಿಕ್ ಮಾಡಿ.
4. ಇದನ್ನು ಪೂರ್ಣಗೊಳಿಸಿದ ಬಳಿಕ ‘ಮೈ ಬ್ಯಾಲೆನ್ಸ್’ ಕ್ಲಿಕ್ ಮಾಡಿ.
5. ಈಗ ‘ಖಾತೆ ಉಳಿತಾಯ’ ಎಂಬುದನ್ನು ಆಯ್ಕೆಮಾಡಿ.
6. ಇಲ್ಲಿ ನೀವು ‘ಎಂ-ಪಾಸ್ಬುಕ್’ ಮೂಲಕ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಿಮ್ಮ ಮೊಬೈಲ್ ಫೋನ್ ನಿಂದ ಪರಿಶೀಲಿಸಬಹುದು.
ಇಷ್ಟೇ ಇಲ್ಲ ಎಸ್.ಬಿಐ ನ ಯೋನೊ ಅಪ್ಲಿಕೇಶನ್ ಮೂಲಕ ಖಾತೆಯನ್ನು ಕೂಡ ತೆರೆಯಬಹುದಾಗಿದೆ. ಯೋನೊ ಆ್ಯಪ್ ಬಳಕೆದಾರರಿಗೆ ಇವಿಷ್ಟು ಮಾತ್ರವಲ್ಲದೇ ವಿವಿಧ ಬಿಲ್ ಗಳನ್ನು ಪಾವತಿಸುವ, ಹಣವನ್ನು ವರ್ಗಾಯಿಸುವ ಸೌಲಭ್ಯಗಳು ಸೇರಿದಂತೆ ಹಲವಾರು ಸೇವೆಗಳನ್ನು ಸಹ ಒದಗಿಸಿದೆ.