Cheluvarayaswamy | ನಮ್ಮಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು
ತುಮಕೂರು : ನಮ್ಮಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು. ಡಿ.ಕೆ.ಶಿವಕುಮಾರ್ ಪಾರ್ಟಿ ಅಧ್ಯಕ್ಷರಾಗಿದ್ದಾರೆ.
ಇಬ್ಬರೂ ಯಾವುದೇ ವ್ಯತ್ಯಾಸ ಇಲ್ಲದೇ ಅನ್ಯೋನ್ಯವಾಗಿ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಬೆಂಬಲ ಕೋರಿದ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕ.
ಅವರು ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಗೆ ಮತ ಕೇಳಿದ್ದಾರೆ. ಅವರು ಮತ ಕೇಳಿದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ನಮ್ಮಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು. ಡಿ.ಕೆ.ಶಿವಕುಮಾರ್ ಪಾರ್ಟಿ ಅಧ್ಯಕ್ಷರಾಗಿದ್ದಾರೆ.
ಇಬ್ಬರೂ ಯಾವುದೇ ವ್ಯತ್ಯಾಸ ಇಲ್ಲದೇ ಅನ್ಯೋನ್ಯವಾಗಿ ಹೋಗುತ್ತಿದ್ದಾರೆ.
ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಇಬ್ಬರೂ ಒಟ್ಟಿಗೆ ಕೂತು ಮಾತಾಡಿಕೊಂಡಿದ್ದಾರೆ.
ಹಿರಿಯ ನಾಯಕರು ವಿಶ್ವಾಸದಿಂದ ಒಟ್ಟಾಗಿ ಹೋಗುವಂತೆ ಇಬ್ಬರೂ ನಾಯಕರಿಗೆ ಹೇಳಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಲ್ ಪಿ ಲೀಡರ್ ಸಿದ್ದರಾಮಯ್ಯರ ಅಭಿಮಾನಿಗಳು ಅವರು ಮುಖ್ಯಮಂತ್ರಿಗಳಾಗಬೇಕು ಎಂದು ಆಸೆ ಪಟ್ಟರೆ ತಪ್ಪೇನಿದೆ..?
ಅದೇ ರೀತಿ ಡಿ ಕೆ ಶಿವಕುಮಾರ್ ಬೆಂಬಲಿಗರೂ ಅವರು ಸಿಎಂ ಆಗಬೇಕು ಎಂದು ಕೇಳಿದರೆ ತಪ್ಪೇನಿದೆ..?
ಹಾಗಂತ ಇಬ್ಬರು ನಾಯಕರ ನಡುವೆ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್- ಬೊಮ್ಮಾಯಿ ಒಂದಾಗಲು ಸಾಧ್ಯ ಇಲ್ಲ.
ಒಕ್ಕಲಿಗ ನಾಯಕರಲ್ಲಿ ಅಶ್ವಥ್ ನಾರಾಯಣ-ಆರ್ ಅಶೋಕ ಒಂದಾಗಲೂ ಸಾಧ್ಯನೆ ಇಲ್ಲ.
ಜೆಡಿಎಸ್ ನಲ್ಲಿ ಕುಮಾರಸ್ವಾಮಿ-ರೇವಣ್ಣ ಸಿಎಂ ಗಾದಿಗಾಗಿ ಫೈಟ್ ಮಾಡುತ್ತಾರೆ. ಇದು ಎಲ್ಲಾ ಪಕ್ಷದಲ್ಲೂ ಇದೆ ಎಂದು ತಿಳಿಸಿದರು.