ಜನರೇ ಎಚ್ಚರ.. ಜ.1ರಿಂದ ಸ್ವಲ್ಪ ಯಾಮಾರಿದ್ರೂ ಜೇಬಿಗೆ ಕತ್ತರಿ!!
ನವದೆಹಲಿ : ಜನವರಿ ಒಂದರಿಂದ ಚೆಕ್ ಪಾವತಿ, ಎಲ್ಪಿಜಿ ಸಿಲಿಂಡರ್ ದರ, ಜಿಎಸ್ಟಿ ಮತ್ತು ಯುಪಿಐ ವಹಿವಾಟು ಪಾವತಿ ಸೇರಿದಂತೆ ಜನರ ನಿತ್ಯ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರುವ ಹಲವು ನಿಯಮಗಳು ಬದಲಾಗಲಿವೆ. ಈ ಬಗ್ಗೆ ಸಂಕ್ಷಿಪ್ತ ವರದಿ ಇಲ್ಲಿದೆ.
ಎಲ್ಪಿಜಿ ಸಿಲಿಂಡರ್ ಬೆಲೆ
ಭಾರತೀಯ ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಮುಂದಿನ ವರ್ಷದಿಂದ ವಾರಕ್ಕೊಮ್ಮೆ ನಿಗದಿ ಪಡಿಸುವುದಕ್ಕೆ ಯೋಜಿಸುತ್ತಿವೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ದೈನಂದಿನ ಏರಿಳಿತದ ಹಿನ್ನೆಲೆಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ವಾರಕ್ಕೊಮ್ಮೆ ಬದಲಾಯಿಸುವ ಅಗತ್ಯವಿದೆ. ಪ್ರಸ್ತುತ, ದೈನಂದಿನ ಆಧಾರದ ಮೇಲೆ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತವೆ.
ಯುಪಿಐ ಪಾವತಿ ಸೇವೆಗೆ ಹೆಚ್ಚುವರಿ ಶುಲ್ಕ
ಎನ್ಪಿಸಿಐ ಜನವರಿ 1ರಿಂದ ಥರ್ಡ್ ಪಾರ್ಟಿ ಅಪ್ಲಿಕೇಷನ್ ಪೂರೈಕೆದಾರರು ನಡೆಸುತ್ತಿರುವ ಯುಪಿಐ ಪಾವತಿ ಸೇವೆಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಎನ್ ಪಿಸಿಐ ಈ ನಿಯಮವನ್ನ ಜಾರಿ ತಂದರೇ ಅಮೆಜಾನ್ ಪೇ, ಗೂಗಲ್ ಪೇ ಮತ್ತು ಫೆÇೀನ್ ಪೇ ವಹಿವಾಟಿನ ಮೇಲೆ ಬಳಕೆದಾರರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಪಾಸಿಟಿವ್ ಪೇ ಸಿಸ್ಟಮ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ವಂಚನೆ ಪರಿಶೀಲಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಮ್ ಪರಿಚಯಿಸಲು ನಿರ್ಧರಿಸಿದೆ. ಇದರ ಪ್ರಕಾರ 50,000 ರೂ.ಗಿಂತ ಹೆಚ್ಚಿನ ಪಾವತಿಗಳಿಗೆ ಮರು ದೃಢೀಕರಣದ ಅಗತ್ಯವಿರುತ್ತದೆ. ಈ ನಿಯಮವು ಜನವರಿ ಒಂದರಿಂದ ಜಾರಿಗೆ ಬರಲಿದೆ.
ಸಂಪರ್ಕವಿಲ್ಲದ ಕಾರ್ಡ್ ವಹಿವಾಟು ಮಿತಿ
ಆರ್ ಬಿಐ ಡಿಜಿಟಲ್ ಪಾವತಿ ಸುರಕ್ಷಿತ ಮತ್ತು ಭದ್ರತೆ ಅಳವಡಿಸಿಕೊಳ್ಳುವ ಉದ್ದೇಶದಿಂದ ಸಂಪರ್ಕವಿಲ್ಲದ ಕಾರ್ಡ್, ವಹಿವಾಟಿನ ಇ-ಆರ್ಡರ್ ಮಿತಿಗಳನ್ನು 2021ರ ಜನವರಿ 1ರಿಂದ 2,000 ರೂ.ಯಿಂದ 5,000 ರೂ.ಗೆ ಹೆಚ್ಚಿಸಲಿದೆ.
ಈ ಫೋನ್ಗಳಲ್ಲಿ ವಾಟ್ಸಾಪ್ ಸ್ಥಗಿತ
ವಿಶ್ವದಾದ್ಯಂತ 2 ಬಿಲಿಯನ್ ಬಳಕೆದಾರರಿಗಾಗಿ ವಾಟ್ಸಾಪ್ ಜನವರಿ 1ರಿಂದ ಕೆಲವು ಪ್ಲಾಟ್ಫಾರ್ಮ್ಗಳಿಂದ ತನ್ನ ಸೇವಾ ಬೆಂಬಲ ಹಿಂತೆಗೆದುಕೊಳ್ಳುತ್ತದೆ. ಆಂಡ್ರಾಯ್ಡ್ ಫೋನ್ ಗಳಿಗೆ, HTC Designo, LG ಆಪ್ಟಿಮಸ್ ಬ್ಲಾಕ್, ಮೋಟೋರೋಲಾ ಡ್ರಾಯ್ಡ್ ರೇಜರ್ ಅಥವಾ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್2 ಸೇರಿದಂತೆ ಮಾಡೆಲ್ ಗಳಲ್ಲಿ ಇನ್ನು ಮುಂದೆ ವಾಟ್ಸಾಪ್ ವರ್ಕ್ ಆಗೋದಿಲ್ಲ.
ಕಾರಿನ ಬೆಲೆ ಏರಿಕೆ ಸಾಧ್ಯತೆ
ಮಾರುತಿ ಸುಜುಕಿ ಇಂಡಿಯಾ, ಟಾಟಾ, ಮಹೀಂದ್ರಾ ಆಂಡ್ ಮಹೀಂದ್ರಾ, ಹ್ಯುಂಡೈ ಸೇರಿದಂತೆ ಬಹುತೇಕ ಕಂಪನಿಗಳು ಹೆಚ್ಚುತ್ತಿರುವ ಇನ್ಪುಟ್ ವೆಚ್ಚವನ್ನು ಸರಿದೂಗಿಸಲು ಜನವರಿ 1ರಿಂದ ತಮ್ಮ ವಾಹನಗಳ ಬೆಲೆ ಹೆಚ್ಚಿಸಲಿವೆ ಎಂದು ತಿಳಿದು ಬಂದಿದೆ.
ಫಾಸ್ಟ್ ಟ್ಯಾಗ್ ಕಡ್ಡಾಯ
2021ರ ಜನವರಿ 1ರಿಂದ ಎಲ್ಲಾ ಕಾರುಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊರಡಿಸಿದೆ. ಅದರಂತೆ 2017ರ ಡಿಸೆಂಬರ್ 1ರ ಮೊದಲು ಮಾರಾಟವಾದ ಎಂ ಮತ್ತು ಎನ್ ವರ್ಗದ ಕಾರುಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel