ಸಿನಿಮಾ ಜಗತ್ತಿನ ಪ್ರಮುಖ ಸುದ್ದಿಗಳು…
01. ನ್ಯಾಯಾಂಗ ನಿಂದನೆ ಆರೋಪದಡಿ ನಟ ಚೇತನ್‌ರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ನಂತರ ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
Sandalwood : ನಟ ಚೇತನ್ ಕುಮಾರ್ ಅಹಿಂಸಾ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ…
02. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ತಂಡಕ್ಕೆ ಸೆಡ್ಡು ಹೊಡೆದು ರಾಖಿ ಭಾಯ್ ಅಭಿಮಾನಿಗಳು ಪ್ರಚಾರದ ಅಖಾಡಕ್ಕೆ ಇಳಿಸಿದ್ದಾರೆ. ಏಪ್ರಿಲ್ 14ಕ್ಕೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೆ ಅಭಿಮಾನಿಗಳೇ ಅಭಿಯಾನ ಶುರುಮಾಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ‘KGF 2 50days to go’ ಅಭಿಯಾನವನ್ನು ಆರಂಭಿಸಿದ್ದಾರೆ.
KGF -2 ಚಿತ್ರತಂಡಕ್ಕೆ ಸೆಡ್ಡು ಅಖಾಡಕ್ಕಿಳಿದ ರಾಖಿ ಭಾಯ್ ಫ್ಯಾನ್ಸ್
03. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾ ಟ್ರೈಲರ್ ಬಗ್ಗೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ರಿವ್ಯೂ ನೀಡಿದ್ದಾರೆ. ಭೀಮ್ಲಾ ನಾಯಕ್ ಟ್ರೈಲರ್ ಎಲೆಕ್ಟ್ರಿಫೈಯಿಂಗ್ ರೀತಿ ಇದೆ. ಪವನ್ ಕಲ್ಯಾಣ್ ಅವರ ಪ್ರತಿ ಡೈಲಾಗ್, ಆಕ್ಷನ್ ಪವರ್ ಫುಲ್ ಆಗಿದೆ ಎಂದಿದ್ದಾರೆ.
Ram Charan | ಪವರ್ ಸ್ಟಾರ್ ಟ್ರೈಲರ್ ಗೆ ಮೆಗಾಪವರ್ ರಿವ್ಯೂ
04. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂನ ಖ್ಯಾತ ನಟಿ ಲಲಿತಾ ಅವರು ವಿಧಿವಶರಾಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಲಲಿತಾ ಅವರು, ‘ಕೇರಳ ಪೀಪಲ್ಸ್ ಆರ್ಟ್ ಕ್ಲಬ್’ ರಂಗ ತಂಡದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದರು.
Lalita | ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಲಲಿತಾ ನಿಧನ
05. ಅಖಂಡ ಸಿನಿಮಾ ಮೂಲಕ ಟಾಲಿವುಡ್ ನಟ ಸಿಂಹ ಬಾಲಕೃಷ್ಣ ಮತ್ತೆ ಫಾರ್ಮ್ ಗೆ ಬಂದಿದ್ದಾರೆ.ಒಂದು ಕಡೆ ಸಿನಿಮಾ ಮತ್ತೊಂದು ಕಡೆ ಓಟಿಟಿ ಟಾಕ್ ಶೋ ಗಳ ಮೂಲಕ ಬಾಲಯ್ಯ ಫುಲ್ ಜೋಷ್ ನಲ್ಲಿದ್ದಾರೆ. ಈ ಮಧ್ಯೆ ಅಖಂಡ ಸಿನಿಮಾದ ಸೀಕ್ವೆಲ್ ಬಗ್ಗೆ ಟಾಲಿವುಡ್ ನಲ್ಲಿ ಸುದ್ದಿ ಹರಿದಾಡುತ್ತಿದೆ.ಸಿಂಹ, ಲೆಜೆಂಡ್ ನಂತರ ಬಾಲಯ್ಯ ಮತ್ತು ನಿರ್ದೇಶಕ ಬೋಯಪಾಟಿ ಶ್ರೀನು ಕಾಂಬಿನೇಷನ್ ಮೋಡಿ ಮಾಡಿತ್ತು. ಅಖಂಡ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಹೀಗಾಗಿ ಅಖಂಡ ಸಿಕ್ವೇಲ್ ಗಾಗಿ ಬಾಲಯ್ಯ ನಿರ್ದೇಶಕ ಬೋಯಪಾಟಿ ಮೇಲೆ ಒತ್ತಡ ಹೇರುತ್ತಿದ್ದಾರಂತೆ. chetan ahimsa Ramcharan bheemla nayak








