ಮತ್ತೆ ಅದೇ ರಾಗ.. ಅದೇ ತಾಳ.. ಪೂಜಾರ ಮತ್ತೆ ವಿಫಲ Cheteshwar Pujara saaksha tv
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪುಜಾರ ಮತ್ತೆ ವಿಫಲರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೂ ಚೇತೇಶ್ವರ್ ಪೂಜಾರ ಬ್ಯಾಟ್ ಅಬ್ಬರಿಸಲೇ ಇಲ್ಲ. ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಭಾರತಕ್ಕೆ ಕನ್ನಡರಾದ ಮಯಾಂಕ್ ಅಗರ್ವಾಲ್ ಮತ್ತು ಕೆ.ಎಲ್.ರಾಹುಲ್ ಉತ್ತಮ ಆರಂಭ ತಂದು ಕೊಟ್ಟಿದ್ದಾರೆ. ಈ ಜೋಡಿ ಶತಕದ ಜೊತೆಯಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮಯಾಂಕ್ 60 ರನ್ ಗಳಿಸಿದ್ದಾಗ ನುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕ್ರೀಸ್ ಗೆ ಬಂದ ಚೇತೇಶ್ವರ್ ಮೊದಲ ಬಾಲ್ ನಲ್ಲಿಯೇ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಅಂದಹಾಗೆ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೂಜಾರ ದಾರುಣವಾಗಿ ವಿಫಲರಾಗಿದ್ದರು. ಕಿವೀಸ್ ವಿರುದ್ಧದ ಮೊದಲ ಟೆಸ್ಟ್‍ನ ಮೊದಲ ಇನ್ನಿಂಗ್ಸ್‍ನಲ್ಲಿ 26 ರನ್ ಗಳಿಸಿದ್ದ ಪೂಜಾರ ಎರಡನೇ ಇನ್ನಿಂಗ್ಸ್‍ನಲ್ಲಿ 22 ರನ್ ಗಳಿಸಿ ಔಟಾದರು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸಿದ್ದರು.
ಈ ಸಂದರ್ಭದಲ್ಲಿ ಪೂಜಾರಾಗೆ ಕೋಕ್ ನೀಡುವುದೇ ಉತ್ತಮ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಆಗುವುದೇ ಅನುಮಾನವಾಗಿತ್ತು. ಆದ್ರೂ ಲಾಸ್ಟ್ ಚಾನ್ಸ್ ಎಂಬಂತೆ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿತ್ತು. ಆದ್ರೆ ದಕ್ಷಿಣ ಆಫ್ರಿಕಾದಲ್ಲೂ ಪೂಜಾರ ಮಂಕಾಗಿದ್ದಾರೆ.









