Cheteshwar Pujara | ಕ್ಯಾಪ್ಟನ್ ಆದ ಪೂಜಾರಾ.. ಮೊದಲ ಪಂದ್ಯದಲ್ಲಿಯೇ ಸೆಂಚೂರಿ
ಟೀಂ ಇಂಡಿಯಾದ ಹಿರಿಯ ಆಟಗಾರ, ಸಸೆಕ್ಸ್ ಸ್ಟಾಂಡಿಂಗ್ ಕ್ಯಾಪ್ಟನ್ ಚೇತೇಶ್ವರ ಪೂಜಾರ ಕೌಂಟಿ ಚಾಂಪಿಯನ್ ಶಿಫ್ ಡಿವಿಜನ್ ಟೂ 2022ರಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮಿಂಚು ಹರಿಸುತ್ತಿದ್ದಾರೆ.
ಮಿಡಿಲ್ಸೆಕ್ಸ್ ಜೊತೆ ನಡೆದ ಪಂದ್ಯದಲ್ಲಿ ಪೂಜಾರಾ ಶತಕ ಬಾರಿಸಿದ್ರು.
ಅಲ್ಲದೇ ಪೂಜಾರಗೆ ಇದು ಕೌಂಟಿ ಚಾಂಪಿಯನ್ ಶಿಫ್ 2022ರಲ್ಲಿ 5ನೇ ಸೆಂಚೂರಿಯಾಗಿದೆ.
ಇನ್ನು 182 ಎಸೆತಗಳಲ್ಲಿ 115 ರನ್ ಗಳನ್ನು ಗಳಿಸಿದ ಪೂಜಾರಾ ಮುಂದಿನ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಅವರ ಇನ್ನಿಂಗ್ಸ್ ನಲ್ಲಿ 10 ಬೌಂಡರಿ, ಒಂದು ಸಿಕ್ಸರ್ ಇದೆ.
ಅಂದಹಾಗೆ ಸಸೆಕ್ಸ್ ರೆಗ್ಯೂಲರ್ ಕ್ಯಾಪ್ಟನ್ ಟಾಮ್ ಹೈನ್ಸ್ ಗಾಯಗೊಂಡಿದ್ದು, ತಂಡದಿಂದ ದೂರ ಉಳಿದಿದ್ದಾರೆ.
ಹೀಗಾಗಿ ಪೂಜಾರಾ ತಾತ್ಕಾಲಿಕ ಕ್ಯಾಪ್ಟನ್ ಆಗಿ ಜವಾಬ್ದಾರಿ ವಹಿಸಿಕೊಂಡರು.
ಇನ್ನು ಮ್ಯಾಚ್ ವಿಷಯಕ್ಕೆ ಬಂದರೇ ಮೊದಲ ದಿನ ಆಟ ಮುಗಿಯುವಷ್ಟರಲ್ಲಿ ನಾಲ್ಕು ವಿಕೆಟ್ ಕಡೆದುಕೊಂಡು 328 ರನ್ ಗಳಿಸಿದೆ.








