ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೀಮ್ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ ನ ಸ್ಥಾನ ಅಲುಗಾಡುತ್ತಿದೆ..?

admin by admin
June 26, 2021
in Newsbeat, Sports, ಕ್ರೀಡೆ
chetheshwar pujara team india saakshatv
Share on FacebookShare on TwitterShare on WhatsappShare on Telegram

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಟೀಮ್ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ ನ ಸ್ಥಾನ ಅಲುಗಾಡುತ್ತಿದೆ..?

chetheshwar pujara team india saakshatv ಚೇತೇಶ್ವರ ಪೂಜಾರ.. ಪಕ್ಕಾ ಟೆಸ್ಟ್ ಕ್ರಿಕೆಟಿಗ. ಎದುರಾಳಿ ಬೌಲರ್ ಗನ್ನು ಕಾಡುವ ರೀತಿಯನ್ನು ಮೆಚ್ಚಲೇಬೇಕು. ಆಧುನಿಕ ಕ್ರಿಕೆಟ್ ನಲ್ಲಿ ಸಾಂಪ್ರಾಯಿಕ ಟೆಸ್ಟ್ ಪಂದ್ಯದ ಬ್ಯಾಟಿಂಗ್ ವೈಖರಿಯನ್ನು ಚೇತೇಶ್ವರ ಪೂಜಾರ ಅವರ ಬ್ಯಾಟಿಂಗ್ ನಲ್ಲಿ ನೋಡಬಹುದಾಗಿದೆ.
ಆದ್ರೆ ಚೇತೇಶ್ವರ ಪೂಜಾರ ಅವರ ಬ್ಯಾಟ್ ನಿಂದ ಸರಾಗವಾಗಿ ರನ್ ಗಳು ಬರುತ್ತಿಲ್ಲ. ಎದುರಾಳಿ ಬೌಲರ್ ಗಳನ್ನು ತಾಳ್ಮೆಯನ್ನು ಪರೀಕ್ಷೆಯನ್ನು ಮಾಡುವ ಪೂಜಾರ ಇತ್ತೀಚಿನ ದಿನಗಳಲ್ಲಿ ರನ್ ಗಳಿಸುವುದನ್ನು ಮರೆತಂತೆ ಆಡುತ್ತಿದ್ದಾರೆ.
ಹೌದು, ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ರೀತಿಯ ತಂತ್ರವಿದೆ. ಕೆಟ್ಟ ಎಸೆತಗಳಿಗೆ ರನ್ ಗಳಿಸುವುದು.. ಒಳ್ಳೆಯ ಎಸೆತಗಳಿಗೆ ಬೌಲರ್ ಗಳಿಗೆ ಗೌರವ ನೀಡುವುದು.. ಹಾಗಂತ ಬೌಲರ್ ನ ಪ್ರತಿ ಎಸೆತಗಳನ್ನು ರಕ್ಷಣಾತ್ನಕವಾಗಿ ಆಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಮೂಡುತ್ತಿದೆ.
ಚೇತೇಶ್ವರ ಪೂಜಾರ ಅವರ ಬ್ಯಾಟಿಂಗ್ ವೈಖರಿಯ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ. ಆದ್ರೆ ಸತತವಾಗಿ ರನ್ ಗಳಿಸದೇ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದಾಗ ಸಹಜವಾಗಿ ತಂಡ ಒತ್ತಡಕ್ಕೆ ಸಿಲುಕುತ್ತದೆ. ಸಹ ಬ್ಯಾಟ್ಸ್ ಮೆನ್ ಕೂಡ ತಾಳ್ಮೆಯನ್ನು ಕಳೆದುಕೊಳ್ಳುತ್ತಾನೆ. ಎದುರಾಳಿ ತಂಡ ಇನ್ನಷ್ಟು ಒತ್ತಡಕ್ಕೆ ಸಿಲುಕಿಸುವಂತೆ ಬೌಲಿಂಗ್ ಮಾಡುತ್ತಾರೆ.
ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲೂ ಅಷ್ಟೇ.. ಚೇತೇಶ್ವರ ಪೂಜಾರ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ರು. ಮೊದಲ ಇನಿಂಗ್ಸ್ ನಲ್ಲಿ ಪೂಜಾರ ಗಳಿಸಿದ್ದು ಕೇವಲ ಎಂಟು ರನ್ ಮಾತ್ರ. ಅದು ಕೂಡ 54 ಎಸೆತಗಳಲ್ಲಿ. ದಾಖಲಿಸಿರುವ ಎಂಟು ರನ್ ಗಳು ಬಂದಿರೊದು ಕೂಡ ಎರಡು ಬೌಂಡ್ರಿಗಳಿಂದ. ಅಂದ್ರೆ ಇನ್ನುಳಿದ 52 ಎಸೆತಗಳಲ್ಲಿ ಒಂದೇ ಒಂದು ರನ್ ಗಳಿಸಿಲ್ಲ. ಎರಡನೇ ವಿಕೆಟ್ ಗೆ ರೋಹಿತ್ ಜೊತೆ 25 ರನ್ ಗಳ ಜೊತೆಯಾಟವನ್ನು ಆಡಿದ್ದರು. ಇದ್ರಲ್ಲಿ ಪೂಜಾರ ಕಾಣಿಕೆ ಎಂಟು ರನ್ ಮಾತ್ರ.
chetheshwar pujara team india saakshatvಇನ್ನು ಎರಡನೇ ಇನಿಂಗ್ಸ್ ನಲ್ಲೂ ಅಷ್ಟೇ..ಪೂಜಾರ ಗಳಿಸಿದ್ದ ರನ್ 15. ಎದುರಿಸಿದ್ದ ಎಸೆತಗಳು 80. ಇಲ್ಲೂ ಕೂಡ ಎರಡು ಬೌಂಡರಿಗಳನ್ನು ದಾಖಲಿಸಿದ್ದರು. ಅಂದ್ರೆ 78 ಎಸತೆಗಳಲ್ಲಿ ಗಳಿಸಿದ್ದು ಏಳು ರನ್ ಗಳನ್ನು ಮಾತ್ರ. ಇಲ್ಲಿ ರೋಹಿತ್ ಶರ್ಮಾ ಜೊತೆ 27 ರನ್ ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಕೊಹ್ಲಿ ಜೊತೆ ಮೂರನೇ ವಿಕೆಟ್‍ಗೆ 20 ರನ್ ಕಲೆ ಹಾಕಿದ್ದರು.
ನಿಜ, ತಂಡ ಸಂಕಷ್ಟದಲ್ಲಿದ್ದಾಗ ತಂಡವನ್ನು ಅಪಾಯದಿಂದ ಪಾರು ಮಾಡುವುದು ಪ್ರತಿ ಆಟಗಾರನ ಜವಾಬ್ದಾರಿ. ಹಾಗಂತ ಹೆಚ್ಚಿನ ರಕ್ಷಣಾತ್ಮಕ ಆಟವೂ ಕೂಡ ಕೆಲವೊಂದು ಬಾರಿ ತಂಡಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಚೇತೇಶ್ವರ ಪೂಜಾರ ಸುಮಾರು 22 ಓವರ್ ಗಳನ್ನು ಆಡಿದ್ದಾರೆ. 23 ರನ್ ದಾಖಲಿಸಿದ್ದಾರೆ. ಅಂದ್ರೆ ಸರಾಸರಿ ಓವರ್‍ಗೆ ಒಂದು ರನ್ ಅಂತ ಹೇಳಬಹುದು.
ಹಾಗಂತ ಚೇತೇಶ್ವರ ಪೂಜಾರ ಅವರ ಹಳೆಯ ಆಟವನ್ನು ಕೂಡ ಮರೆಯುವಂತಿಲ್ಲ. ಕ್ರೀಸ್ ಗೆ ಅಂಟಿಕೊಂಡು ತಂಡಕ್ಕೆ ಅಮೋಘ ಗೆಲುವನ್ನು ದಕ್ಕಿಸಿಕೊಟ್ಟಿದ್ದಾರೆ. ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಲ್ಲೂ ಅಷ್ಟೇ.. ಮಹತ್ವದ ಘಟ್ಟದಲ್ಲಿ ರಕ್ಷಣಾತ್ಮಕವಾಗಿ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
chetheshwar pujara team india saakshatvಆದ್ರೆ ಚೇತೇಶ್ವರ ಪೂಜಾರ ಅವರು ವಿಕೆಟ್ ರೊಟೇಟ್ ಮಾಡ್ಕೊಂಡು ಆಡಿದ್ರೆ ಸುಲಭವಾಗಿ ಎದುರಾಳಿ ತಂಡಕ್ಕೆ ಒತ್ತಡ ಹೇರಬಹುದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಬ್ ಪಂತ್ ನಂತಹ ಬ್ಯಾಟ್ಸ್ ಮೆನ್ ಗಳು ಎದುರಾಳಿ ತಂಡಕ್ಕೆ ಇನ್ನಷ್ಟು ಅಪಾಯಕಾರಿಯಾಗಬಹುದು.
33ರ ಹರೆಯದ ಚೇತೇಶ್ವರ ಪೂಜಾರ ಅವರು 86 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 46ರ ಸರಾಸರಿಯಲ್ಲಿ 6267 ರನ್ ಕಲೆ ಹಾಕಿದ್ದಾರೆ. 2010ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಪೂಜಾರ, ಒಟ್ಟು 14,038 ಎಸೆತಗಳನ್ನು ಎದುರಿಸಿದ್ದಾರೆ. ಇದ್ರಲ್ಲಿ ಮೂರು ದ್ವಿಶತಕ ಸೇರಿ 18 ಶತಕಗಳಿವೆ. 29 ಅರ್ಧಶತಕಗಳಿವೆ. 740 ಬೌಂಡರಿ ಮತ್ತು 14 ಸಿಕ್ಸರ್ ಗಳನ್ನು ದಾಖಲಿಸಿದ್ದಾರೆ.
2013ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಪೂಜಾರ, ಆಡಿರುವುದು ಐದು ಪಂದ್ಯಗಳನ್ನು ಮಾತ್ರ. 2014ರ ನಂತರ ಪೂಜಾರ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ನ ಕೊನೆಯ ಕೊಂಡಿಯಾಗಿ ಪೂಜಾರ ಕಾಣಿಸಿಕೊಳ್ಳುತ್ತಾರೆ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ನಿಂತು ಆಡುವಂತಹ ಬ್ಯಾಟ್ಸ್ ಮೆನ್ ಗಳಲ್ಲಿ ಪೂಜಾರ ಕೂಡ ಒಬ್ಬರಾಗಿದ್ದಾರೆ.
ಆದ್ರೆ ಪೂಜಾರ ಅವರು ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಆದ್ಯತೆ ಕೊಡುತ್ತಿರುವುದರಿಂದ ಅವರ ಸ್ಥಾನವೂ ಅಲುಗಾಡುತ್ತಿದೆ. ಈಗಾಗಲೇ ಪೂಜಾರ ಬದಲು ಕೆ.ಎಲ್. ರಾಹುಲ್ ಗೆ ಅವಕಾಶ ನೀಡಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಏನೇ ಆಗ್ಲಿ, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ನೀರಸ ಆಟವನ್ನಾಡಿದ್ದಾರೆ ಎಂಬ ಕಾರಣಕ್ಕೆ ಅವರ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಪ್ರಶ್ನೆ ಮಾಡಬಾರದು. ಆದ್ರೂ ಭವಿಷ್ಯದ ಟೀಮ್ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ ಅವರ ಸ್ಥಾನ ಮಾತ್ರ ಗ್ಯಾರಂಟಿ ಇಲ್ಲ ಎಂಬುದು ಮಾತ್ರ ಸುಳ್ಳಲ್ಲ.

Tags: bcciCheteshwar PujaraCricketEnglandpujaraSportsteam indiatest cricketvirat kohliWTC final
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram