ಹಂಸಲೇಖ ಪರ ಕನ್ನಡ ಚಿತ್ರರಂಗ ಯಾಕೆ ಧ್ವನಿ ಎತ್ತುತ್ತಿಲ್ಲ..? : ಚೇತನ್ ಪ್ರಶ್ನೆ
ನಾದ ಬ್ರಹ್ಮ ಹಂಸಲೇಖ ಅವರು ಪ್ರಸ್ತುತ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.. ದಿವಂಗತ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆಯ ವಿರುದ್ಧ ದೂರುಗಳು ದಾಖಲಾಗಿದ್ದು, ಅನೇಕರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಹಂಸಲೇಖ ಅವರನ್ನ ಬೆಂಬಲಿಸಿಯೂ ಅನೇಕ ಜಾಥಾಗಳು ನಡೆಯುತ್ತಿವೆ.. ಈ ನಡುವೆ ಇಂದು ಹಂಸಲೇಖರನ್ನು ಬೆಂಬಲಿಸಿ, ಬೆಂಗಳೂರಿನ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ನವೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ನಡೆಸಲು, ಕರ್ನಾಟಕದ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಬೃಹತ್ ಜಾಥಾಕ್ಕೆ ಕರೆ ನೀಡಿತ್ತು.
ಈ ಕರೆಯ ಮೇಲೆ ಕನ್ನಡದ ನಟ ಚೇತನ್ ಕೂಡ ಹಂಸಲೇಖರನ್ನು ಬೆಂಬಲಿಸಿ, ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕನ್ನಡ ಚಿತ್ರರಂಗ ಯಾಕೆ ಹಂಸಲೇಖರ ಬೆಂಬಲಕ್ಕೆ ನಿಂತಿಲ್ಲ ಎಂದು ಕಿಡಿಕಾರಿದ್ರು..
ಇಷ್ಟೆಲ್ಲಾ ನಡೆಯುತ್ತಿದ್ದರೂ ಹಂಸಲೇಖ ಪರ ಚಿತ್ರರಂಗ ನಿಲ್ಲದೆ ಇರೋದಕ್ಕೆ ಬೇಸರ ವ್ಯಕ್ತಪಡಿಸಿ ಹಂಸಲೇಖ ಸರ್ ಅವರು ಸಾಹಿತ್ಯ ವಲಯಕ್ಕೆ ಆಗಿರಬಹುದು, ಸಂಗೀತ ವಲಯಕ್ಕೆ ಆಗಿರಬಹುದು. ಅವರು ಮಾಡಿದ ಕೆಲಸ ದೊಡ್ಡದು. ಏನು ನೋವಾಗುತ್ತೆ ಅಂದರೆ, ಎಲ್ಲೋ ಒಂದು ಕಡೆ ಈ ಸಂವಿಧಾನದ ಹಕ್ಕನ್ನು ಉಳಿಸಬೇಕು ಅಂತ ಕನ್ನಡ ಚಿತ್ರರಂಗ ಯಾಕೆ ಧ್ವನಿ ಗೂಡಿಸಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹಂಸಲೇಖ ಪರವಾಗಿ ಚಿತ್ರರಂಗ ಯಾಕೆ ಮಾತಾಡಿಲ್ಲ. ನಮ್ಮ ಕಾಳಜಿ ಕಡಿಮೆ ಇದೆಯಾ? ಚಿತ್ರರಂಗದಲ್ಲಿ ಧೈರ್ಯ ಕಡಿಮೆ ಇದೆಯಾ. ಸಿನಿಮಾದಲ್ಲಿ ದೊಡ್ಡದಾಗಿ ಎಲ್ಲರೂ ಹೀರೋಗಳು ಹೊಡೆಯುವುದು ಬಡಿಯುವುದು ತೋರಿಸುತ್ತೇವೆ.
ಆದರೆ, ಯಾಕೆ ಹಂಸಲೇಖ ಸರ್ಗೆ ಈ ತರ ಅನ್ಯಾಯ ಆಗಿದ್ದೂ ಗೊತ್ತಿದ್ದೂ ಗೊತ್ತಿದ್ದೂ ಸುಮ್ಮನೆ ಇರೋದು.. ಜನ ಅವರ ಮಾತು ಒಪ್ಪಲಿ ಬಿಡಲಿ, ಕ್ಷಮೆ ಕೇಳಿ ಆದ್ಮೇಲೆ ಅವರನ್ನು ಬಿಟ್ಟು ಬಿಡಬೇಕು. ಅವರನ್ನು ಯಾವುದೇ ಕಾರಣಕ್ಕೂ ಈ ರೀತಿ ಅಪರಾಧಿ ಮಾಡಿ ಜೈಲಿಗೆ ಹಾಕುವುದನ್ನು ಯಾರೂ ಒಪ್ಪುವುದಿಲ್ಲ. ಅಂತಹದ್ರಲ್ಲಿ ಚಿತ್ರರಂಗ ಯಾಕೆ ನಿಶಬ್ಧವಾಗಿದೆ ಅನ್ನುವುದು ನನಗೆ ಬಹಳ ದುಃಖ ಆಗುತ್ತೆ ಎಂದು ಕಿಡಿಕಾರಿದ್ದಾರೆ.