ಚೇತನ್ ಸಕಾರಿಯಾ ಅವರ ತಂದೆ ಕೋವಿಡ್ ನಿಂದ ನಿಧನ
ಜೈಪುರ : ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಚೇತನ್ ಸಕಾರಿಯಾ ಅವರ ತಂದೆ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆರ್ ಆರ್ ತಿಳಿಸಿದೆ.
ಚೇತನ ಸಕಾರಿಯಾ ಅವರ ತಂದೆ ಕಾಂಜಿಭಾಯ್ ಸಕಾರಿಯಾ ಅವರು ಇಂದು ಬೆಳಗ್ಗೆ ಕೋವಿಡ್-19 ನಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ನಮಗೆ ನೋವಾಗುತ್ತಿದೆ.
ಕಷ್ಟದ ಸಮಯದಲ್ಲಿ ಚೇತನ್ ಹಾಗೂ ಅವರ ಕುಟುಂಬಕ್ಕೆ ಸಾಧ್ಯವಾದಷ್ಟು ಬೆಂಬಲ ನೀಡುತ್ತೇವೆ ಎಂದು ರಾಜಸ್ಥಾನ ರಾಯಲ್ಸ್ ಟ್ವೀಟ್ ಮಾಡಿದೆ.
ಚೇತನ್ ಸಕಾರಿಯಾ ಐಪಿಎಲ್ ಗೂ ಮುನ್ನ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು. ಐಪಿಎಲ್ ಅರ್ಧದಲ್ಲೇ ನಿಂತು ಮನೆಗೆ ವಾಪಸ್ಸಾದಾಗ ತಂದೆಗೆ ಕೊರೊನಾ ಇರುವುದನ್ನು ತಿಳಿದು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಈ ಬಗ್ಗೆ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡುತ್ತಾ ಅವರು, ಐಪಿಎಲ್ ನಿಂದ ಬಂದ ಹಣವನ್ನ ತಂದೆಯ ಚಿಕಿತ್ಸೆಗಾಗಿ ಖರ್ಚು ಮಾಡುವುದಾಗಿ ತಿಳಿಸಿದ್ದರು.
ಆರ್ ಆರ್ ತಂಡ ಚೇತನ್ ಸಕಾರಿಯಾ ಅವರನ್ನು ಒಂದು ಕೋಟಿಗೂ ಅಧಿಕ ಮೊತ್ತ ಕೊಟ್ಟ ಖರೀದಿ ಮಾಡಿತ್ತು.