Chetheshwar pujara | ಟೆಸ್ಟ್ ನಲ್ಲಿ 100ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಪೂಜಾರ chetheshwar-pujara-ranji-trophy- comeback saaksha tv
ಬಹಳ ದಿನಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ ಜ್ಯೂನಿಯರ್ ವಾಲ್ ಖ್ಯಾತಿ ಚೇತೇಶ್ವರ್ ಪೂಜಾರಾ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಆದ್ರೆ ರಣಜಿ ಟ್ರೋಫಿ ಅಂಗವಾರಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಪೂಜಾರಾ ಧನಾಧನ್ ಇನ್ನಿಂಗ್ಸ್ ಆಡಿದ್ದಾರೆ.
ತಮ್ಮ ಸಹಜ ಶೈಲಿಗೆ ವಿರುದ್ಧವಾಗಿ ಬ್ಯಾಟ್ ಬೀಸಿದ ಚೇತೇಶ್ವರ್ ಪೂಜಾರಾ, 109.64ರ ಸರಾಸರಿಯಲ್ಲಿ ಅಬ್ಬರಿಸಿದರು.
83 ಎಸೆತಗಳನ್ನು ಎದುರಿಸಿದ ಪೂಜಾರಾ, ಒಂದು ಸಿಕ್ಸರ್, 16 ಬೌಂಡರಿಗಳ ಸಹಾಯದಿಂದ 91 ರನ್ ಗಳಿಸಿ 9 ರನ್ ಗಳಿಂದ ಸೆಂಚೂರಿ ಮಿಸ್ ಮಾಡಿಕೊಂಡರು.
ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ, ಡಕೌಟ್ ಆಗಿದ್ದರು.
ಹೀಗಾಗಿ ಚೇತೇಶ್ವರ್ ಪೂಜಾರ ಅವರನ್ನ ಶ್ರೀಲಂಕಾ ವಿರುದ್ಧದ ಟೆಸ್ ಸರಣಿಯಿಂದ ಕೈ ಬಿಡಲಾಗಿದೆ.
ಇತ್ತ ಈ ಪಂದ್ಯದಲ್ಲಿ ಮುಂಬೈನ ಯುವ ಬ್ಯಾಟರ್ ಸರ್ಫರಾಜ್ ಖಾನ್ (275) ಮತ್ತು ರಹಾನೆ (129) ಅದ್ಭುತ ಶತಕಗಳೊಂದಿಗೆ ಮಿಂಚಿದರು.









