ಒಂದರ ಮೇಲೊಂದು ಚುನಾವಣೆ ಸೋತು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರದ ಬಾಗಿಲು ಮುಚ್ಚಿಕೊಂಡಿರೋ ಬಿಜೆಪಿ ಪಕ್ಷ ಇತ್ತೀಚಿನ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೊಲು ಕಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ “ಛತ್ರಪತಿ ಮೋದಿ ಜಿಂದಾಬಾದ್,” ಎಂದು ಹಿಂದಿಯಲ್ಲಿ ಟ್ವೀಟ್ ಮಾಡುವ ಮುಲಕ ಉಮಾ ಭಾರತಿ ಸುದ್ದಿಯಾಗಿದ್ದಾರೆ. ‘ಛತ್ರಪತಿ’ ಎನ್ನುವ ಗುಣವಾಚಕ ಪದವು ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಅವರನ್ನು ಕುರಿತು ಹೇಳಲಾಗುತ್ತದೆ. ಇತ್ತೀಚೆಗೆ ಬಿಜೆಪಿ ನಾಯಕರೊಬ್ಬರು ಬರೆದ ಪುಸ್ತಕದಲ್ಲಿ ಮೋದಿ ಅವರನ್ನು ಛತ್ರಪತಿ ಶಿವಾಜಿಗೆ ಹೋಲಿಕೆ ಮಾಡಲಾಗಿತ್ತು. ಇದನ್ನೇ ಉಮಾ ಭಾರತಿಯವರು ವಿಡಂಬನೆಗೆ ಬಳಸಿಕೊಂಡು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇನ್ನು ಈ ರೀತಿಯ ಟ್ವೀಟ್ ಮಾಡಿರೋದು ಸೋಲಿನ ನಂತರ ಮೋದಿಯವರನ್ನು ಸಮಾಧಾನ ಪಡಿಸಲಿಕ್ಕಾಗಿ ಮಾತ್ರ ಎಂಬ ಮಾತುಗಳು ರಾಜಕೀಯ ವಿರೋಧಿ ವಯಲದಲ್ಲಿ ಕೇಳಿ ಬರುತ್ತಿವೆ.









